ಸಿನಿಮಾವೊಂದು ಅದ್ಭುತವಾಗಿ ಮೂಡಿ ಬರಬೇಕೆಂದರೆ ಅಲ್ಲಿ ಛಾಯಾಗ್ರಾಹಕನ ಕೈಚಳಕ ಮುಖ್ಯವಾಗುತ್ತದೆ. ಯಾವುದೇ ದೃಶ್ಯವನ್ನು ಆಯಾ ಕಥೆಗೆ, ಸಂದರ್ಭಕ್ಕೆ ಅನುಗುಣವಾಗಿ ತೆಗೆಯಬೇಕಾದರೆ ಛಾಯಾಗ್ರಾಹಕನ ಪರಿಕಲ್ಪನೆ ಮುಖ್ಯವಾಗುತ್ತದೆ. ನಿಜ ಹೇಳಬೇಕೆಂದರೆ ಛಾಯಾಗ್ರಾಹಕನೆಂದರೆ ದೃಶ್ಯಗಳಿಗೆ ಜೀವ ತುಂಬುವ ಕಲೆಗಾರ. ಒಂದು ಚಿತ್ರ ದೃಶ್ಯಕಾವ್ಯವಾಗಬೇಕಾದರೆ ಛಾಯಾಗ್ರಾಹಕ ಪಡುವ ಶ್ರಮ ಅಷ್ಟಿಷ್ಟಲ್ಲ. ಹೀಗೆ ಹಲವು ಸಿನಿಮಾಗಳಿಗೆ ಜೀವ ತುಂಬಿ ಸಿನಿಮಾ ಛಾಯಾಗ್ರಹಣ ಕ್ಷೇತ್ರದಲ್ಲಿ ಛಾಪು ಮೂಡಿಸುತ್ತಿರುವ ಯುವ ಪ್ರತಿಭೆಯಲ್ಲಿ ಸುರೇಂದ್ರ ಪಣಿಯೂರು ಒಬ್ಬರು.
ಕಾಪು ಉಚ್ಛಿಲದ ಸಮೀಪದ ಬೆಳಪು ಗ್ರಾಮದ ಪಣಿಯೂರಿನಲ್ಲಿ ನೆಲೆಸಿರುವ ಕುಲಾಲ ಸಮುದಾಯದ ರಾಜು ಮೂಲ್ಯ ಮತ್ತು ಸುಶೀಲ ಮೂಲ್ಯ ದಂಪತಿಯ ಮಗನಾದ ಸುರೇಂದ್ರ ಕುಲಾಲ್ ಪಣಿಯೂರು ಇವರು ಹಲವಾರು ಕನ್ನಡ-ತುಳು ಸಿನಿಮಾ,ಧಾರಾವಾಹಿ ಮತ್ತು ಕಿರುಚಿತ್ರಗಳಿಗೆ ಛಾಯಾಗ್ರಾಹಕನಾಗಿ ಸಿನಿಲೋಕದಲ್ಲಿ ಮಿಂಚುತ್ತಿದ್ದಾರೆ. ಕಾಪು ಕುಲಾಲ ಸಂಫದ ಸದಸ್ಯನಾಗಿರುವ ಇವರು ಒಬ್ಬ ಕ್ರಿಯಾಶೀಲ ಛಾಯಾಗ್ರಹಕರು.
ಅಣ್ಣು-ಕುಂದಾಪುರ ಕನ್ನಡ ಚಿತ್ರ, ಉಡಲ್-ತುಳು ಚಿತ್ರ, ಗುಡ್ಡೆದ ಭೂತ-ತುಳು ಚಿತ್ರ, ಕೋಟಿ ಚೆನ್ನಯ- ಕನ್ನಡ ಧಾರಾವಾಹಿ, ಪ್ರೀತಿದ ಬದುಕ್-ತುಳು ಧಾರಾವಾಹಿ, ಕ್ಲೀನ್ ಕೃಷ್ಣಪ್ಪ ನೈಸ್ ನಾರಾಯಣ-ತುಳು ಧಾರಾವಾಹಿ, ಮಧುಮಿತ-ಟೆಲಿಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದಾರೆ. ಬಲಿ, ಮಾನವೀಯತೆ, ಶವ, ಚೋಕೋಲೇಟ್, ರೀಚಾರ್ಜ್ ಎವೈಲೇಬಲ್, ಪ್ರೀತಿಯ ಸೆಳತ, ದ್ವಂದ್ವ ಮುಂತಾದ ಕಿರುಚಿತ್ರಗಳಲ್ಲೂ ತಮ್ಮ ಕ್ಯಾಮೆರಾ ಕೈಚಳಕ ತೋರಿಸಿ ಸೈ ಅನ್ನಿಸಿಕೊಂಡಿದ್ದಾರೆ. ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವ ಹಂಬಲ ಹೊಂದಿರುವ ಸುರೇಂದ್ರ ಪಣಿಯೂರು ಅವರಿಗೆ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಬೆಸ್ಟ್ ಆಫ್ ಲಕ್ ಹೇಳುತ್ತದೆ . ಅವರ ಸಂಪರ್ಕ ದೂರವಾಣಿ ಸಂಖ್ಯೆ:9008972844
ಮಾಹಿತಿ ಕೃಪೆ : ಉದಯ ಕುಲಾಲ್ ಕಳತ್ತೂರು