ಮುಂಡ್ಕೂರು : ಇಲ್ಲಿನ ನಾನಿಲ್ತಾರ್ ಕುಲಾಲ ಸಂಘದಲ್ಲಿ `ಆಟಿದ ಕೂಟ’ ಕಾರ್ಯಕ್ರಮ ಜುಲೈ ೩೧ರಂದು ನಡೆಯಿತು. ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಮಂಜಪ್ಪ ಮೂಲ್ಯ ಅವರು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತೋಕೂರು ಕುಲಾಲ ಸಂಘದ ಮಾಜಿ ಅಧ್ಯಕ್ಷ ಶ್ರೀಧರ ಬಂಗೇರ ಅವರು ಆಟಿಯ ತಿಂಗಳ ಮಹತ್ವ ಮತ್ತು ಮಾಹಿತಿ ಕುರಿತು ಮಾತನಾಡಿದರು. ಸುಧಾಕರ ಕುಲಾಲ್ ಆಟಿ ತಿಂಗಳ ಸೊಬಗು, ವಿಶೇಷತೆ ಬಗ್ಗೆ ಮಾತನಾಡಿದರು. ಕೋಶಾಧಿಕಾರಿ ವಾರಿಜ ಅವರೂ ಆಟಿ ತಿಂಗಳ ಬಗ್ಗೆ ಅನುಭವವನ್ನು ಮೆಲುಕು ಹಾಕಿದರು.
ಸಂಘದ ಅಧ್ಯಕ್ಷೆ ಸುಜಾತ ಮೂಲ್ಯ, ಹಿರಿಯ ಸದಸ್ಯರಾದ ಬೊಗ್ಗು ಮೂಲ್ಯ ಬೇಲಾಡಿ, ಸಂಜೀವ ಮೂಲ್ಯ, ಕುಶ ಮೂಲ್ಯ, ತೋಕೂರು ಕುಲಾಲ ಸಂಘದ ಮಾಜಿ ಅಧ್ಯಕ್ಷ ಯೋಗೀಶ್ ಮೂಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರಕ್ಷಿತಾ ಅವರು ನಿರೂಪಿಸಿದರೆ, ಕುಶ ಆರ್ ಮೂಲ್ಯ ಸ್ವಾಗತಿಸಿದರು. ರಶ್ಮಿ ವಂದನಾರ್ಪಣೆಗೈದರು. ಆಟಿ ತಿಂಗಳ ವಿಶೇಷ ಖಾದ್ಯಗಳ ಸವಿಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಚಿತ್ರ-ವರದಿ : ಅರುಣಾ ಕುಲಾಲ್, ಉಳೆಪಾಡಿ