ಮಂಗಳೂರು : ದಕ್ಷಿಣ ಭಾರತದ ಪ್ರಮುಖವಾದ ಹಬ್ಬಗಳಲ್ಲಿ ವರ ಮಹಾಲಕ್ಷ್ಮಿ ಹಬ್ಬವೂ ಒಂದು. ಸಕಲ ಐಶ್ವರ್ಯವನ್ನೂ ಕರುಣಿಸುವ ಮಹಾಲಕ್ಷ್ಮಿಗೆ ಮನೆಮನೆಯಲ್ಲಿ ಸಂಭ್ರಮದ ಪೂಜೆ ನಡೆಯುತ್ತದೆ. ಎಲ್ಲೆಲ್ಲೂ ಸುಖ, ಸಂಪತ್ತು, ಸಮೃದ್ಧಿಯನ್ನು ಕರುಣಿಸೋ ಭಾಗ್ಯದಾತೆಯ ಆರಾಧನೆ ನಡೆಯುತ್ತದೆ ಶ್ರೀ ಮಹಾವಿಷ್ಣುವಿನ ಪತ್ನಿ ವರ ಮಹಾಲಕ್ಷ್ಮಿಯನ್ನು ಪೂಜಿಸಿದರೆ ಸಕಲ ಸೌಭಾಗ್ಯವೂ ದೊರೆಯುತ್ತದೆ ಎಂಬ ನಂಬಿಕೆ ಜನರಲ್ಲಿದೆ.
ಪ್ರತಿವರ್ಷದಂತೆ ವಿವಿಧ ಕುಲಾಲ ಸಂಘಗಳಲ್ಲಿ ಈ ವರ್ಷವೂ ಸಾಮೂಹಿಕ ವರ ಮಹಾಲಕ್ಷ್ಮಿ ವ್ರತ ಪೂಜೆ ಆಚರಿಸಲಾಗುತ್ತಿದ್ದು ಅದರ ವಿವರ…
* ಸುರತ್ಕಲ್ ಕುಲಾಲ ಸಂಘದಲ್ಲಿ ಆಗಸ್ಟ್ 12ರಂದು ೨೪ನೇ ವರ್ಷದ ವರ ಮಹಾಲಕ್ಷ್ಮಿ ವ್ರತ ಪೂಜೆ ಮಧ್ಯ ಮಂಡಲೋತ್ಸವ ನಡೆಯಲಿದೆ.
* ಕಾರ್ಕಳ ಕುಲಾಲ ಸಂಘದಲ್ಲಿ ಆಗಸ್ಟ್ 12ರಂದು ೨ನೇ ವರ್ಷದ ವರ ಮಹಾಲಕ್ಷ್ಮಿ ವ್ರತ ಪೂಜೆ ನಡೆಯಲಿದೆ.
* ಮುಂಬಯಿಯ ಸಮಾಜ ಸೇವಕ ಮುಂಡ್ಕೂರು ನಾನಿಲ್ತಾರ್ ಕುಲಾಲ ಸಂಘದ ಗೌರವಾಧ್ಯಕ್ಷ ಐತು ಮೂಲ್ಯ ಅವರ ನೇತೃತ್ವದಲ್ಲಿ ಆಗಸ್ಟ್ 15ರಂದು ಗೋರೆಗಾಂವ್ ಪೂರ್ವದ ದುರ್ಗಾದೇವಿ ಮಂದಿರದಲ್ಲಿ ಸಾಮೂಹಿಕ ಮಹಾಲಕ್ಷ್ಮಿ ಪೂಜೆ ನಡೆಯಲಿದ
* ಮಂಗಳೂರು ಪೊಲೀಸ್ ಲೇನ್ ನಲ್ಲಿರುವ ಶ್ರೀ ದೇವಿ ದೇವಸ್ಥಾನದಲ್ಲಿ ೧೯ನೇ ವರ್ಷದ ವರ ಮಹಾಲಕ್ಷ್ಮಿ ವ್ರತ ಪೂಜೆ ಆಗಸ್ಟ್ 12ರಂದು ನಡೆಯಲಿದೆ.
*ಬಂಟ್ವಾಳ ವಗ್ಗ ಕುಲಾಲ ಸಮಾಜ ಸೇವಾ ಸಂಘದಲ್ಲಿ ಆಗಸ್ಟ್ 12, ಶುಕ್ರವಾರ ಅಪರಾಹ್ನ 4 ಗಂಟೆಗೆ ಸಂಘದ ಮಹಿಳಾ ಘಟಕದ ಸಹಯೋಗದೊoದಿಗೆ ಕಾಡಬೆಟ್ಟು ಶ್ರೀ ಶಾರದಾoಭ ಭಜನ ಮಂದಿರದಲ್ಲಿ 9 ನೇ ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಶ್ಮೀ ಪೂಜವ್ರತ ಜರಗಲಿರುವುದು.
*ಕುಲಾಲ ಸಂಘ ನಾನಿಲ್ತಾರ್ ಮುಂಡ್ಕೂರು ಇಲ್ಲಿ ಆಗಸ್ಟ್ 8ರಂದು 10ನೇ ವರ್ಷದ ಸಾಮೂಹಿಕ ವರ ಮಹಾಲಕ್ಷ್ಮಿ ವ್ರತ ಪೂಜೆ ನಡೆಯಲಿದೆ.