ಮೈಸೂರು : ಸಮುದಾಯದ ಬೆಳವಣಿಗೆಯ ಸಮಯದಲ್ಲಿ ವಿಭಜನೆಗೆ ಅವಕಾಶ ಮಾಡಿಕೊಡಬಾರದು ಎಂದು ಶಾಸಕ ವಾಸು ಹೇಳಿದರು.
ಜಿಲ್ಲಾ ಕುಂಬಾರ ಮಹಿಳಾ ಸಂಘದ ವತಿಯಿಂದ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಗಣ್ಯ ವ್ಯಕ್ತಿಗಳಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಭಾವಂತ ಮಕ್ಕಳು ಮತ್ತು ಜನರಿಂದಾಗಿ ಕುಂಬಾರ ಸಮುದಾಯ ಪ್ರಗತಿಯಲ್ಲಿದೆ. ಇಂಥ ಸಮಯದಲ್ಲಿ ಯಾವುದೇ ಸಮಸ್ಯೆಗಳಿಗೆ ಅವಕಾಶ ನೀಡಬಾರದು. ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ರಂಗದಲ್ಲಿ ಜಯ ಸಾಧಿಸಬಹುದು ಎಂದು ಹೇಳಿದರು.
ಕೆಪಿಎಸ್ಸಿ ನಿವೃತ್ತ ಸದಸ್ಯ ಕೃಷ್ಣಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಧಿಕ ಅಂಕ ಗಳಿಸುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಅವರು ಜೀವನದ ಪರೀಕ್ಷೆಗೂ ಕಠಿಣ ಶ್ರಮ ವಹಿಸಬೇಕು ಎಂದರು.
ಜಿಲ್ಲೆಯ ವಿವಿಧ ತಾಲೂಕಿನ ೨೦೧೫-೧೬ ನೇ ಸಾಲಿನ ಎಸ್ಸೆಸ್ ಎಲ್ಸಿ, ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಇತರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ೩೦ ಗಣ್ಯ ವ್ಯಕ್ತಿಗಳನ್ನು ಗೌರವಿಸಲಾಯಿತು.
ಕುಂಬಾರರ ರಾಜ್ಯ ನೌಕರರ ಸಂಘದ ಅಧ್ಯಕ್ಷ ಆರ್ ಶ್ರೀನಿವಾಸ್, ಮಾಜಿ ಕಾರ್ಯದರ್ಶಿ ಗಂಗಾಯಲ್ಲಯ್ಯ, ನಗರ ಪಾಲಿಕೆ ಸದಸ್ಯ ಎಚ್ಎಸ್ ಪ್ರಕಾಶ್, ಸಂಘದ ಅಧ್ಯಕ್ಷೆ ರೇಣುಕಾಂಬ ಶ್ರೀನಿವಾಸಯ್ಯ, ಉಪಾಧ್ಯಕ್ಷೆ ಸುಬ್ಬುಲಕ್ಷ್ಮೀ ರಾಮಶೆಟ್ಟಿ, ಕಾರ್ಯದರ್ಶಿ ನಾಗರತ್ನ ಚನ್ನಕೇಶವಯ್ಯ ಮುಂತಾದವರು ಉಪಸ್ಥಿತರಿದ್ದರು.
ಮೈಸೂರು ಜಿಲ್ಲಾ ಕುಂಬಾರ ಮಹಿಳಾ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ-ಸನ್ಮಾನ
Kulal news
1 Min Read