ಮಂಗಳೂರು : ಕರ್ನಾಟಕ ರಾಜ್ಯ ಬಿಜೆಪಿಯ ಮೆಡಿಕಲ್ ವಿಂಗ್ ಆರೋಗ್ಯ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕರಾಗಿ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಅವರನ್ನು ಆಯ್ಕೆ ಮಾಡಲಾಗಿದೆ. ರಾಜ್ಯಮಟ್ಟದ ಈ ಪ್ರತಿಷ್ಠಿತ ವಿಂಗ್ ಗೆ ಆಯ್ಕೆಯಾದ ಇಬ್ಬರು ಸಹ ಸಂಚಾಲಕರಲ್ಲಿ ಇವರು ಒಬ್ಬರಾಗಿದ್ದಾರೆ.
ರಾಜ್ಯದ ಎಲ್ಲಾ ಆಸ್ಪತ್ರೆ ಗಳ ಜೊತೆ ವೈದ್ಯಕೀಯ ಸಂಸ್ಥೆಗಳು ಅಲೋಪಥಿ, ಹೋಮಿಯೋಪತಿ, ಆಯುರ್ವೇದ, ನರ್ಸಿಂಗ್, ಫಾರ್ಮಸಿ, ಲ್ಯಾಬ್ ಸೇರಿದಂತೆ ಲಕ್ಷಾಂತರ ಆರೋಗ್ಯ ಕಾರ್ಯಕರ್ತರ-ವೈದ್ಯರ ಸಂಘಟನೆ ಮಾಡುವ, ಆ ಮೂಲಕ ಪಕ್ಷ ಕಟ್ಟುವ ಕೆಲಸ ಮಾಡಲು ರಾಜ್ಯ ನಾಯಕರು ಈ ಜವಾಬ್ದಾರಿ ನೀಡಿರುತ್ತಾರೆ.
ಆರೆಸ್ಸೆಸ್ ಹಿನ್ನೆಲೆಯಿರುವ ಡಾ. ಕುಲಾಲ್ ದ.ಕ ಜಿಲ್ಲೆಯ ಸಂಘಟನಾತ್ಮಕ ಚಟುವಟಿಕೆಯಲ್ಲಿ ಕಳೆದ 15 ವರ್ಷಗಳ ಕಾಲ ಸದ್ದಿಲ್ಲದೇ ದುಡಿಯುತ್ತಿದ್ದರು. ಆ ಮೂಲಕ ಬಿಜೆಪಿ ಮುಖಂಡರ ಗಮನ ಸೆಳೆದ ಇವರು, ಈ ಹಿಂದೆ ದ ಕ ಜಿಲ್ಲಾ ಮೆಡಿಕಲ್ ವಿಂಗ್ ನ ಸಂಚಾಲರಾಗಿ, ಜಿಲ್ಲಾ ಕಮಿಟಿಯ ವಿಶೇಷ ಆಹ್ವಾನಿತರಾಗಿ, ರಾಜ್ಯ ಶಿಕ್ಷಕ ಪ್ರಕೋಷ್ಠ ದ ಸಹ ಸಂಚಾಲಕರಾಗಿ ಆಯ್ಕೆಯಾಗಿದ್ದರು. ಬಿಎಸ್ ಎನ್ ಎಲ್ ಸಲಹಾ ಮಂಡಳಿಯ ಉಡುಪಿ -ದ.ಕ ಜಿಲ್ಲಾ ಸದಸ್ಯರಾಗಿ ಪಕ್ಷದಲ್ಲಿ ಸೇವೆ ಸಲ್ಲಿಸಿರುವ ಕುಲಾಲ್, ರಾಜ್ಯ ಬಿಜೆಪಿ ರಾಜ್ಯ ಮಟ್ಟದಲ್ಲಿ ಗುರುತಿಸಿರುವ ಮೂವರು ಕುಂಬಾರ ನಾಯಕರಲ್ಲಿ ಕರಾವಳಿಯ ಏಕೈಕ ನಾಯಕರಾಗಿದ್ದಾರೆ.
ಅವರು ವೈದ್ಯರ ಸಂಘಟನೆಯಲ್ಲಿ ರಾಜ್ಯ-ರಾಷ್ಟ್ರಮಟ್ಟದಲ್ಲಿ ಮಾಡಿದ ಸಾಧನೆ, ಸಾಮಾಜಿಕ ಹೋರಾಟ, ಬರಹ, ಭಾಷಣ, ಜನಜಾಗೃತಿಗಳನ್ನು ಹತ್ತಿರದಿಂದ ಗಮನಿಸಿದ ಪಕ್ಷ ಮೇಲ್ವರ್ಗದ ಜನರೇ ತುಂಬಿರುವ ಮೆಡಿಕಲ್ ವಿಂಗ್ ನ ಸಾರಥ್ಯ ಕೊಟ್ಟಿರುವುದು ಅವರ ಸಂಘಟನಾ ಶಕ್ತಿಗೆ ಕೊಟ್ಟ ದೊಡ್ಡ ಗೌರವವಾಗಿದೆ.