ಮುಂಬಯಿ : ಕುಲಾಲ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ಕುಲಾಲ ಸಮಾಜ ಭಾಂದವರಿಗಾಗಿ “ಆಟಿದ ಒಂಜಿ ದಿನ” (ಆಹಾರೋತ್ಸವ) ಹಾಗು ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭವು ಜುಲೈ 31ರ ಆದಿತ್ಯವಾರ ನಡೆಯಲಿದೆ.
ಮಾಟು೦ಗಾ ವೆಸ್ಟ್ ನಲ್ಲಿರುವ ವಿಶ್ವೇಶ್ವರಯ್ಯ ಹಾಲ್’ನ ಸಮರಸ ಭವನದಲ್ಲಿ ಸಮಾರಂಭ ಆಯೋಜಿಸಲಾಗಿದ್ದು, ಆಹಾರೋತ್ಸವದಲ್ಲಿ ಭಾಗವಹಿಸುವ ಸಮಾಜ ಬಾಂಧವರು ಜುಲೈ 25ರ ಒಳಗೆ ಹೆಸರು ನೋಂದಾಯಿಸಬೇಕು. ಒಟ್ಟು ಐದು ವಿಭಾಗದಲ್ಲಿ (ಸಸ್ಯಾಹಾರಿ) ಸ್ಪರ್ಧೆ ನಡೆಯಲಿದ್ದು ಹೆಸರು ನೋಂದಾಯಿಸಲು ಕೆಳಕಂಡ ಮೊಬೈಲ್ ನಂಬರ್ ಸಂಪರ್ಕಿಸಬಹುದು. 8087296182-9167691118-9920055365-9987817642-9833386810
ಜುಲೈ 31ರಂದು ಕುಲಾಲ ಸಂಘ ಮುಂಬಯಿ ಮಹಿಳಾ ವಿಭಾಗದ ವತಿಯಿಂದ `ಅಡುಗೆ ಸ್ಪರ್ಧೆ’
womens corner
1 Min Read


