ಮಂಗಳೂರು : ಪ್ರಕೃತಿಯ ಮಡಿಲಲ್ಲಿ ಸಹಜ ಬದುಕು ಸಾಗಿಸುತ್ತಿದ್ದ ಹಿರಿಯರ ಬದುಕಿನ ಆದರ್ಶಗಳು ನಮಗೆ ಮಾರ್ಗದರ್ಶಕವಾಗಿರಬೇಕು ಎಂದು ಶಾಸಕ ಬಿ ಎ ಮೊಯಿದಿನ್ ಬಾವಾ ಹೇಳಿದರು.
ಅವರು ಕುಳಾಯಿ ಹೊಸಬೆಟ್ಟುವಿನಲ್ಲಿ ಪ್ರಶಸ್ತಿ ಪುರಸ್ಕೃತ ಕಲಾಕುಂಭ ಸಾಂಸ್ಕೃತಿಕ ವೇದಿಕೆಯು ಆಯೋಜಿಸಿರುವ ತುಳುನಾಡ ಸಂಸ್ಕೃತಿ- ಆಟಿ-ಆಯ, ಮರ್ದ್ ಮಾಯ ಆಟಿ ತಿಂಗೊಳ್ದ ಮರ್ದ್ ಮಾಯದ ಪೊಲಬು ಕಾರ್ಯಕ್ರಮದಲ್ಲಿ ಮಾತನಾಡಿದರು. ವೇದಿಕೆಯಲ್ಲಿ ಕಸ್ತೂರಿ ಪಂಜ, ಅಶೋಕ್ ಶೆಟ್ಟಿ, ರಾಮ್ ಪ್ರಸಾದ್ , ಗಂಗಾಧರ ಹೊಸಬೆಟ್ಟು, ಸುಭಾಶ್ಚಂದ್ರ ಶೆಟ್ಟಿ, ಆನಂದ ಭಂಡಾರಿ, ಯಜ್ಞೆಶ್ ಬರ್ಕೆ, ಜನಾರ್ಧನ ಪಡುಪಣಂಬೂರು, ಪುಂಡಲೀಕ ಹೊಸಬೆಟ್ಟು, ಮೋಹನ್ ದಾಸ್, ಶಂಕರ್ ಐ ಮೂಲ್ಯ, ದ್ಯಾನಂದ ಕತ್ತಲ್ ಸಾರ್, ಸದಾನಂದ ಸಾಲ್ಯಾನ್, ವಾರಿಜಾ ಕುಳಾಯಿ ಮುಂತಾದವರು ಭಾಗವಹಿಸಿದ್ದರು.
ಸಮಾರಂಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ಹೊಸಬೆಟ್ಟುವಿನಲ್ಲಿ ಕಲಾಕುಂಭ ಸಾಂಸ್ಕೃತಿಕ ವೇದಿಕೆಯ ತುಳುನಾಡ ಸಂಸ್ಕೃತಿ `ಆಟಿ-ಆಯ, ಮರ್ದ್- ಮಾಯ’ ಆಟಿ ತಿಂಗಳ ಕಾರ್ಯಕ್ರಮ
Kulal news
1 Min Read