ಬೆಂಗಳೂರು : ದ.ಕ. ಕುಲಾಲ ಸಂಘ ಬೆಂಗಳೂರು ಮಹಿಳಾ ಘಟಕ ಇದರ ವತಿಯಿಂದ ಸಮಾಜ ಬಾಂಧವರಿಗೆ ಅಡುಗೆ ಸ್ಪರ್ಧೆಯನ್ನು ಜುಲೈ 17, ಭಾನುವಾರದಂದು ಆಯೋಜಿಸಲಾಗಿದೆ.
ಆಂದ್ರಹಳ್ಳಿ ಸೌಮ್ಯಕಾಳಿ ಬಡಾವಣೆಯ ಮಂಜುನಾಥ ಸಭಾ ಭವನದ ಆವರಣದಲ್ಲಿ ಸ್ಪರ್ಧೆ ನಡೆಯಲಿದೆ. ಆಸಕ್ತಿಯುಳ್ಳ ಕುಲಾಲ ಸಮಾಜದ ಮಹಿಳೆಯರು ವಿವಿಧ ಖಾದ್ಯವನ್ನು ತಯಾರಿಸಿ ಸ್ಪರ್ಧೆಯಲ್ಲಿ ಪ್ರದರ್ಶಿಸಿ ಮೈಕ್ರೋ ಓವನ್, 7.5 ಲೀಟರ್ ಹಾಗೂ 5ಲೀಟರ್ ಕುಕ್ಕರ್ ಬಹುಮಾನ ಗೆಲ್ಲಬಹುದಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಕೆಲವು ನಿಬಂಧನೆಗಳಿದ್ದು, ಜುಲೈ16ರ ಸಂಜೆಯೊಳಗೆ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ 9845240921 ಅಥವಾ 9845542745 ಮೊಬೈಲ್ ಸಂಖ್ಯೆ ಸಂಪರ್ಕಿಸಬಹುದು.


