ಮಂಗಳೂರು : ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಕುಲಾಲ ಸಮಾಜ ಸಂಘಟಿತರಾಗುವುದು ಅನಿವಾರ್ಯ. ಇದರಿಂದ ನಮ್ಮ ಸಮಸ್ಯೆಗಳನ್ನು ಗಮನಕ್ಕೆ ತಂದು ಪರಿಹರಿಸಿಕೊಳ್ಳುವ ಪ್ರಯತ್ನ ಮಾಡಲು ಸಾಧ್ಯ ಎಂದು ಕುಳಾಯಿ ಕುಲಾಲ ಸಂಘದ ಅಧ್ಯಕ್ಷ ಜನಾರ್ಧನ ಕುಲಾಲ್ ಕಾವಿನಕಲ್ಲು ಹೇಳಿದರು.
ಅವರು ಕುಳಾಯಿ ಶ್ರೀ ವೆಂಕಟರಮಣ ಹಿ. ಪ್ರಾ. ಶಾಲೆಯಲ್ಲಿ ಇತ್ತೀಚೆಗೆ ನಡೆದ ಕುಲಾಲ ಸಂಘದ ೨೯ನೆ ವಾರ್ಷಿಕ ಮಹಾಸಭೆ, ಸನ್ಮಾನ-ಪುಸ್ತಕ ಹಾಗೂ ಸಲಕರಣೆ ವಿತರಣೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಧ್ಯಾಪಿಕೆಯರಾದ ಚೇತನಾ ಕೃಷ್ಣಾಪುರ, ಜಯಂತಿ ಕೆ, ಅಮೂಲ್ಯ ಪ್ರತಿಷ್ಠಾನದ ಅಧ್ಯಕ್ಷ ಮುರಳಿದಾಸ್ ಕುಲಾಲ್, ಎಮ್ಮಾರ್ಪಿಎಲ್ ವಿತ್ತ ಅಧಿಕಾರಿ ಜಯೇಶ್ ಗೋವಿಂದ್ , ರಜತ ಸೇವಾ ಟ್ರಸ್ಟ್ ನ ಶ್ರೀನಾಥ್ , ಕುಲಾಲ ಮಹಿಳಾ ಮಂಡಲದ ಅಧ್ಯಕ್ಷೆ ಉಮಾ ಯಾದವ್ ಮುಂತಾದ ಗಣ್ಯರು ಭಾಗವಹಿಸಿದ್ದರು. ಸಮಾರಂಭದಲ್ಲಿ ಯಕ್ಷಗಾನ ಭಾಗವತ ಕುಳಾಯಿ ಸದಾನಂದ ಕುಲಾಲ್ ಅವರನ್ನು ಸನ್ಮಾನಿಸಲಾಯಿತು.