ಮಂಗಳೂರು : ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ರಾಜಕೀಯವಾಗಿ ಹಿಂದುಳಿದ ಸಮಾಜವೆನಿಸಿದ ಕುಂಬಾರ/ಕುಲಾಲ ಜನಾಂಗಕ್ಕೆ ಶೈಕ್ಷಣಿಕ ಹಾಗೂ ಉದ್ಯೋಗ ಮೀಸಲಾತಿ ನೀಡಬೇಕೆಂದು ಕರಾವಳಿ ಕುಂಬಾರರ ಯುವ ವೇದಿಕೆ ಮತ್ತು ಕರಾವಳಿ ಕುಂಬಾರರ ಒಕ್ಕೂಟ ಸರಕಾರಕ್ಕೆ ಆಗ್ರಹಿಸಿದೆ.
ಕೇರಳ ಮತ್ತು ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಮಡಕೆ ಮಾಡಿ ಬದುಕುವ ಕುಂಬಾರ ಜನಾಂಗಕ್ಕೆ ಶೈಕ್ಷಣಿಕ ಹಾಗೂ ಉದ್ಯೋಗ ಮೀಸಲಾತಿ ನೀಡಿ ಅವರಿಗೆ ಸಾಮಾಜಿಕ ನ್ಯಾಯ ಹಾಗೂ ರಾಜಕೀಯ ಮರುಹುಟ್ಟು ನೀಡಲು ಪ್ರಯತ್ನಿಸುತ್ತಿದೆ. ಇದೇ ರೀತಿ ಕರ್ನಾಟಕದ ಕುಂಬಾರ, ಕುಲಾಲ, ಗುನಗ, ಮೂಲ್ಯ, ಹಾಂಡ, ಕುಂಬಾರ ಸೆಟ್ಟಿ, ಚಕ್ರಸಾಲಿ, ತೆಲುಗು ಹಾಗೂ ಲಿಂಗಾಯತ ಕುಂಬಾರರಿಗೂ ಶೈಕ್ಷಣಿಕ ಹಾಗೂ ಉದ್ಯೋಗ ಮೀಸಲಾತಿ ನೀಡಬೇಕು. ಅಗತ್ಯಬಿದ್ದರೆ ನದಿ, ಕಾಡು-ಗುಡ್ಡ ಪ್ರದೇಶಗಳಲ್ಲಿ ಬದುಕಿಗಾಗಿ ಅಲೆಯುವ ಕುಂಬಾರರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ರಾಜ್ಯದ ಸಂಸದರು, ಮುಖ್ಯಮಂತ್ರಿ ಮತ್ತು ಇತರ ಸಚಿವರು ಪ್ರಯತ್ನಿಸಬೇಕು. ಈ ಮೂಲಕ ಕುಂಬಾರ/ಕುಲಾಲ ಜನಾಂಗಕ್ಕೆ ಸಾಮಾಜಿಕ ನ್ಯಾಯ ನೀಡಬೇಕೆಂದು ಜಂಟಿ ಹೇಳಿಕೆಯೊಂದರಲ್ಲಿ ಯುವ ವೇದಿಕೆ ಮತ್ತು ಕರಾವಳಿ ಕುಂಬಾರರ ಒಕ್ಕೂಟ ಆಗ್ರಹಿಸಿದೆ.
ಕುಂಬಾರ/ಕುಲಾಲ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕರಾವಳಿ ಕುಂಬಾರರ ಯುವ ವೇದಿಕೆ ಒತ್ತಾಯ
Kulal news
1 Min Read