ಮುಂಬಯಿ: ಕುರ್ಲಾ (ಪ.) ಬಜಾರ್ ವಾರ್ಡ್ನಲ್ಲಿರುವ ಶ್ರೀ ಮಹಮ್ಮಾಯಿ ಮಂದಿರದ 44ನೇ ವಾರ್ಷಿಕ ವರ್ಧಂತಿ ಮಹೋತ್ಸವ ಇತ್ತೀಚೆಗೆ ಜರಗಿತು. ವೇದಮೂರ್ತಿ ಪೆರ್ಣಂಕಿಲ ಹರಿದಾಸ್ ಭಟ್ ವಿದ್ಯಾವಿಹಾರ್ ನೇತೃತ್ವದಲ್ಲಿ ಬೆಳಗ್ಗೆ 8ರಿಂದ ಸಾಮೂಹಿಕ ಪ್ರಾರ್ಥನೆ, ಆದ್ಯ ಗಣಪತಿ ಯಾಗ, ನವಕ ಪ್ರಧಾನ ಹೋಮ, ಕಲಶಾಭಿಷೇಕ, ಅಲಂಕಾರ ಪೂಜೆ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ ಜರಗಿತು. ಮಂದಿರದ ಸಂಸ್ಥಾಪಕ ಹಾಗೂ ದೇವಿಪಾತ್ರಿ ನಾರಾಯಣ ಬಿ. ಮೂಲ್ಯ ಹಾಗೂ ಅರ್ಚಕ ಆದರ್ಶ್ ಭಟ್ ಉಪಸ್ಥಿತಿಯಲ್ಲಿ ಜರಗಿದ ಉತ್ಸವದಲ್ಲಿ ರಾತ್ರಿ ಪೂಜೆ, ದೇವಿ ಆವೇಶದ ಅಮೃತ ನುಡಿ, ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಮಹಾಪೂಜೆಯ ಸಂದರ್ಭದಲ್ಲಿ ಜೆರಿಮರಿಯ ದಿನೇಶ್ ಕೋಟ್ಯಾನ್ ಅವರು ವಾದ್ಯ, ಓಲಗದಲ್ಲಿ ಸಹಕರಿಸಿದರು. ತುಳು-ಕನ್ನಡಿಗರು ಪಾಲ್ಗೊಂಡಿದ್ದರು. ಕಾರ್ಯಕಾರಿ ಸಮಿತಿಯ ಸದಸ್ಯರಾದ ಹರೀಶ್ ಐ. ಲಾಲ್ವಾಣಿ, ಲಾಲ್ ಎಚ್. ವಲೇಚಾ, ವಿಶ್ವನಾಥ ಜಿ. ಮೂಲ್ಯ, ಪ್ರಭಾಕರ ಬಿ. ಶೆಟ್ಟಿ, ಮಾಧವ ಬಿ. ಬಂಗೇರ, ಗಣೇಶ್ ಕೆ. ಶೆಟ್ಟಿ, ಸದಾನಂದ ಮೂಲ್ಯ, ನಂದಕುಮಾರ್ ಯಾಧವ್, ಮಹಾಬಲ ಶೆಟ್ಟಿ, ದಾರಾ ಜೈಸ್ವಾಲ್, ಸಂಗಮ್ಲಾಲ್ ಮೋರಿಯಾ ಕಾರ್ಯಕ್ರಮಕ್ಕೆ ಸಹಕರಿಸಿದರು.
ಅಶೋಕ್ ಯಾಧವ್, ಪ್ರಮೋದ್ ಬಂಗೇರ, ಸಂದೀಪ್ ಮಹೇಶ್ವರಿ, ಧರ್ಮರಾಜ್ ಮೌರ್ಯ, ರಾಜ್ಕುಮಾರ್, ಅಮರ್ ಸಿ. ವರುನ್, ಆತ್ತಾಯ್ ಭಾಯಿ ನಿಹಾಲ್ ಸಿಂಗ್, ಬಾಲು ಚೌಗುಲೆ, ರಮೇಶ್ ಪೂಜಾರಿ, ರಾಜು ಜಗ್ಧಾನೆ, ರತಿ ಸಾಲ್ಯಾನ್, ಮುನ್ನಾಲಾಲ್ ಶರ್ಮಾ, ಸತೀಶ್ ಸಾಗರ್, ರಶ್ಮೀ ಸತೀಶ್ ಸಾಗರ್, ಆನಂದ್ ಯಾಧವ್, ಮಮತಾ ಶರ್ಮಾ, ಸಪ್ನಾ ಶೆಟ್ಟಿ ಕಾರ್ಯಕ್ರಮಕ್ಕೆ ಸಹಕರಿಸಿದರು.
ಶ್ರೀ ಕ್ಷೇತ್ರದಲ್ಲಿ ಅಭಿಷೇಕ ಸೇವೆ, ಸೀಯಾಳ ಅಭಿಷೇಕ, ಕರ್ಪೂರ ಆರತಿ, ಕುಂಕುಮಾರ್ಚನೆ, ತ್ರಿಮಧುರ ನೈವೇದ್ಯ, ವಿಶೇಷ ಪ್ರಾರ್ಥನಾ ಸೇವೆ, ಪಂಚಾಮೃತ ಅಭಿಷೇಕ, ಲಲಿತಾ ಅಷ್ಟೋತ್ತರ ಸೇವೆ, ಲಲಿತಾ ಸಹಸ್ರ ನಾಮ ಪಾರಾಯಣ, ಲಲಿತಾ ಸಹಸ್ರ ನಾಮಾರ್ಚನೆ, ತ್ರಿಕಾಲ ನಿತ್ಯ ಪೂಜೆ, ಹೂವಿನ ಪೂಜೆ ಇತ್ಯಾದಿ ದೈನಂದಿನ ಸೇವೆಗಳನ್ನು ನೀಡಲಿಚ್ಚಿಸುವ ಭಕ್ತಾದಿಗಳು ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಮಂದಿರದ ಶ್ರೀದೇವಿ ಪಾತ್ರಿ ಮತ್ತು ಸಂಸ್ಥಾಪಕ ನಾರಾಯಣ ಬಿ. ಮೂಲ್ಯ ತಿಳಿಸಿದ್ದಾರೆ.