ಉಡುಪಿ : ಯಕ್ಷಗಾನ ಕಲಾರಂಗ ಉಡುಪಿ ಅಮಾಸೆಬೈಲಿನ ಸಮೀಪ ರಟ್ಟಾಡಿಯಲ್ಲಿ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿನಿ ಅಶ್ವಿನಿ ಕುಲಾಲಳಿಗೆ ಕಟ್ಟಿಸಿಕೊಟ್ಟ ಮನೆ ‘ವಿದ್ಯಾಸದನ’ ದ ಉದ್ಘಾಟನೆ ಇತ್ತೀಚೆಗೆ ಜರಗಿತು. ಉದ್ಯಮಿ ಕೆ. ಬಾಲಕೃಷ್ಣ ರಾವ್ ಮತ್ತು ವಿಶ್ವನಾಥ್ ಶೆಣೈ ಜ್ಯೋತಿ ಬೆಳಗಿ ಶುಭ ಕೋರಿದರು.
ಸಂಸ್ಥೆಯ ಅಧ್ಯಕ್ಷ ಕೆ. ಗಣೇಶ್ ರಾವ್ ಸಂಸ್ಥೆ ರಚನಾತ್ಮಕ ಕಾರ್ಯಗಳಿಂದ ಜನರ ಪ್ರೀತಿ, ವಿಶ್ವಾಸ ಗಳಿಸಿಕೊಂಡಿದೆ, ಎಂ. ಗಂಗಾಧರ್ ರಾವ್ ಎಲ್ಲರಿಗೆ ಮಾದರಿಯಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮನೆಯ ಸಂಪೂರ್ಣ ಪ್ರಾಯೋಜಕತ್ವ ವಹಿಸಿಕೊಂಡ ಸಂಸ್ಥೆಯ ಉಪಾಧ್ಯಕ್ಷರಾದ ಎಂ. ಗಂಗಾಧರ್ ರಾವ್ ಇದು ನನಗೆ ಸಿಕ್ಕ ಅವಕಾಶ, ಮನೆ ಭೇಟಿ ಮಾಡಿದ ಸಂದರ್ಭದಲ್ಲೇ ಇದನ್ನು ಸಂಕಲ್ಪಿಸಿದ್ದೆ ಈಗ ಅದನ್ನು ಪೂರೈಸಿದ ತೃಪ್ತಿ ನನ್ನದಾಗಿದೆ ಎಂದರು. ಮನೆಯನ್ನು ಕಟ್ಟುವ ಸಂದರ್ಭ ಸ್ಥಳೀಯ ಮೇಸ್ತ್ರಿಗಳು, ಬಡಗಿಗಳು ನೀಡಿದ ಸಹಕಾರವನ್ನು ಶ್ಲಾಘಿಸಿದರು. ಸಂಸ್ಥೆಯ ಅಧ್ಯಕ್ಷರು ಮೇಸ್ತ್ರಿ ಲಕ್ಷ್ಮಣ ನಾಯಕ್, ಮರದ ಕೆಲಸ ನಿರ್ವಹಿಸಿದ ಮಂಜುನಾಥ್ ಆಚಾರ್ಯರಿಗೆ ಸ್ಮರಣಿಕೆ ಇತ್ತು ಗೌರವಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾದ್ಯಕ್ಷ ಪಿ. ಕಿಶನ್ ಹೆಗ್ಡೆ ಜತೆ ಕಾರ್ಯದರ್ಶಿ ಎಚ್.ಎನ್. ಶೃಂಗೇಶ್ವರ್ ಹಾಗೂ ಕಾರ್ಯಕರ್ತರಾದ ಮನೋಹರ್ ಕೆ, ವಿ. ಜಿ. ಶೆಟ್ಟಿ, ಎಸ್ ಗಣರಾಜ್ ಭಟ್, ಎಚ್. ಎನ್ ವೆಂಕಟೇಶ್, ರಾಜೇಶ್ ನಾವಡ, ಕೆ. ಅಜಿತ್ ಕುಮಾರ್, ವಿದ್ಯಾಪ್ರಸಾದ್, ಪ್ರಥ್ವೀರಾಜ್ ಕವತ್ತಾರು, ಅಶೋಕ್. ಎಂ, ಕೆ. ಗೋಪಾಲ್, ಭುವನಪ್ರಸಾದ್ ಹೆಗ್ಡೆ, ಅನಂತರಾಜ್ ಉಪಾಧ್ಯ, ತ್ರಿಲೋಚನ್. ಎಸ್, ರಾಜೀವಿ, ಮಂಜುನಾಥ್, ಕೆ. ಆನಂದ ಶೆಟ್ಟಿ, ದಿನೇಶ್ ಪಿ. ಪೂಜಾರಿ, ಕೃಷ್ಣಮೂರ್ತಿ ಭಟ್, ಸುದರ್ಶನ. ಎಸ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಮುರಲಿ ಕಡೆಕಾರ್ ಸಂಸ್ಥೆಯ ಕಾರ್ಯಚಟುವಟಿಕೆಯನ್ನು ಪರಿಚಯಿಸಿ, ಈ ಮೊದಲು ನಾಲ್ಕು ಮನೆ ಕಟ್ಟಿಕೊಟ್ಟುದನ್ನು ತಿಳಿಸಿ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು.