ಕದ್ರಿ ಕುಲಾಲ ಬಂಜನ್ ಆದಿಮೂಲಸ್ಥಾನದಲ್ಲಿ ನಾಗದೇವರ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮ
ಮಂಗಳೂರು : ದೈವ-ದೇವರ ಉದ್ಧಾರದ ಜೊತೆಗೆ ಸಮಾಜದ ಅಶಕ್ತರಿಗೆ ಸೂಕ್ತ ನೆರವು ನೀಡಿದಲ್ಲಿ ದೈವ, ದೇವರ ಕೆಲಸಗಳು ಅರ್ಥಪೂರ್ಣವಾಗುತ್ತದೆ ಎಂದು ಕುಲಾಲ ಸಮಾಜದ ಮುಖಂಡ, ವೈದ್ಯ ಅಣ್ಣಯ್ಯ ಕುಲಾಲ್ ಉಳ್ತೂರು ಹೇಳಿದರು.
ಕದ್ರಿ, ಬಾಳೆಬೈಲು ಕುಲಾಲ ಬಂಜನ್ ಕುಟುಂಬಸ್ಥರ ಆದಿಮೂಲ ಕ್ಷೇತ್ರದ ಸ್ಥಾನದಲ್ಲಿ ನಾಗಬ್ರಹ್ಮ ಸಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕುಂಬಾರರಿಗೆ ದೇವರು ಒಲಿದ ಹಾಗೆ ಬೇರೆ ಯಾರಿಗೂ ಒಲಿದಿಲ್ಲ. ಪಂಚಭೂತವನ್ನೇ ಬಂಡವಾಳವಾಗಿಸಿ ಬದುಕನ್ನು ಕಟ್ಟಿಕೊಂಡ ಕುಂಬಾರ-ಕುಲಾಲರ ಶ್ರಮಕ್ಕೆ ದೇವರು ಮೆಚ್ಚಿದ್ದಾನೆ. ದೇವ,ದೈವಸ್ಥಾನಗಳಲ್ಲಿ ಕುಲಾಲರಿಗೆ ಪ್ರಮುಖ ಸ್ಥಾನವಿದೆ. ಹೀಗಾಗಿ ಕುಂಬಾರು ಬ್ರಹ್ಮಕಲಶ, ನಾಗಮಂಡಲ ಮುಂತಾದ ಧಾರ್ಮಿಕ ಕಾರ್ಯಕ್ರಮ ಮಾಡುವಾಗ ದುಂದುವೆಚ್ಚ ಮಾಡದೇ, ಆರೋಗ್ಯ, ಶಿಕ್ಷಣ, ಮನೆ-ಮಠ ಹಾಗೂ ಅಶಕ್ತ ಕುಲಬಂಧುಗಳಿಗೆ ಸಹಾಯ ಹಸ್ತ ನೀಡಬೇಕು. ಆಯಾಯ ಬರಿಯವರು ಅವರ ಕುಟುಂಬದಲ್ಲಿರುವ ಬಡವರ ನೊಂದವರ ನೋವಿಗೆ ಸ್ಪಂದಿಸಿದರೆ ಕುಲಾಲ ಸಂಘಗಳ ಕೆಲಸ ಸುಲಭವಾಗುತ್ತದೆ . ಇದು ಸಮಾಜಕ್ಕೆ ಇದು ಅಗತ್ಯವಾಗಿ ಆಗಬೇಕಾದ ಕೆಲಸ ಎಂದು ಹೇಳಿದರು.
ಸುಮಾರು 5 ಘಂಟೆಗಳಷ್ಟು ಧೀರ್ಘವಾಗಿ ನಡೆದ ಸಭೆಯ ಅದ್ಯಕ್ಷೀಯ ಭಾಷಣ ಮಾಡಿದ ಡಾ.ಕುಲಾಲ್, ರಾಜಕೀಯದಲ್ಲಿ ದ.ಕ ಜಿಲ್ಲಾ ಪಂಚಾಯತ್ ಗೆ ಮಹಿಳಾ ಮೀಸಲಾತಿ ಬಂದಿದೆ. ಸಮಾಜದ ಕಸ್ತೂರಿ ಪಂಜ ರವರಿಗೆ ದಕ ಜಲ್ಲಾ ಪಂಚಾಯತ್ ಅದ್ಯಕ್ಷಗಿರಿ ಸಿಕ್ಕಿ ಕುಲಾಲರಿಗೆ ಸಾಮಾಜಿಕ ನ್ಯಾಯ ಸಿಗಲಿ ಎಂದು ಅವರು ಹಾರೈಸಿದರು.
ಒಡಿಯೂರು ದೇವಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾಜಿ ಮೇಯರ್ ಮಹಾಬಲ ಮಾರ್ಲ, ಚಿದಂಬರ ಬೈಕಂಪಾಡಿ, ರಾಮಚಂದ್ರ ದೋಟ, ಪುರುಷೋತ್ತಮ ಕೊಟ್ಟಾರಿ, ಮಮತಾ ಗಟ್ಟಿ, ರೂಪಾ ಡಿ ಬಂಗೇರ, ಗೋಪಾಲ ಸಾಲ್ಯಾನ್, ಮಯೂರ್ ಉಳ್ಳಾಲ್, ಕೃಷ್ಣಾ ಸಾಲ್ಯಾನ್, ಜಯಂತ ಬಂಗೇರ ಮುಂತಾದವರು ಉಪಸ್ಥಿತರಿದ್ದರು.
——————————-ಆದಿಮೂಲಸ್ಥಾನದ ಉಗಮ—————————————-
ಸುಮಾರು 300 ವರ್ಷಗಳ ಹಿಂದೆ ಕದ್ರಿ ಕೆಪಿಟಿಯ ಹಿಂಭಾಗದ ಬಾಳೇಬೈಲಿನಲ್ಲಿ ಸುಮಾರು 80 ಎಕ್ರೆ ಜಮೀನಿನಲ್ಲಿ ಕೃಷಿ ಮಾಡಿಕೊಂಡು ತನ್ನ ಕುಟುಂಬದೊಡನೆ ಬದುಕುತ್ತಿದ್ದ ಅವಿಭಕ್ತ ಕುಟುಂಬದ ಹಿರಿಯ ವ್ಯಕ್ತಿ ಕೋಟಿ ಮೂಲ್ಯ. ಕೃಷಿಯ ಜೊತೆಗೆ ಸಮೀಪದ ಧರ್ಮಸ್ಥಳ ದೇವಸ್ಥಾನದ ಮೂಲವಾದ ಕದ್ರಿ ದೇವಸ್ಥಾನದ ಮೂಲ್ಯಣ್ಣನಾಗಿ ದುಡಿಯುತ್ತಾ ದೇವಸ್ಥಾನಕ್ಕೆ ಬೇಕಾದ ಸಾವಿರಗಟ್ಟಲೆ ಹಣತೆಗಳನ್ನ ಮಾಡಿ ಒದಗಿಸುತ್ತಿದ್ದರು. ಹೀಗೆ ಬದುಕಿದ್ದ ಕುಟುಂಬ ಕಷ್ಟ ಕಾರ್ಪಣ್ಯಗಳಿಗೆ ಒಳಗಾಗಿ ಭೂಮಿ ಮನೆ ಮಠ ಕಳೆದುಕೊಂಡು
ದಿಕ್ಕಾ ಪಾಲಾಯಿತು.
ಆ ಮನೆಯಲ್ಲಿದ್ದ ದೈವ, ಭೂತಗಳು ಕೃಷಿ ಭೂಮಿಯಲ್ಲಿದ್ದ ನಾಗಸ್ಥಾನಗಳು ಅನಾಥವಾದವು. ಅನ್ಯಧರ್ಮದವರ ಪಾಲಾದ ಭೂಮಿಯಲ್ಲಿದ್ದ ನಾಗನಿಗೆ ಸೇವೆಯನ್ನು ಆಗಾಗ ಕೊಡುತ್ತಿದ್ದ ಕಾಲದಲ್ಲಿ ನಾಗನ ಕಲ್ಲನ್ನೇ ಧ್ವಂಸ ಮಾಡಲಾಯಿತು.ಅದರ ಫಲವಾಗಿ ಅಲ್ಲಿಯೇ ಹತ್ತಿರ ಇರುವ ಈಗಿನ ಖ್ಯಾತ ಹಾಸ್ಪಿಟಲ್ ಹಾಗೂ ಆಸ್ಪತ್ರೆಯನ್ನು ಅನ್ಯಧರ್ಮದವರು ಮಾರುವವರೆಗೆ ಅವರ ಕುಟುಂಬ ಮಾನಸಿಕ ಅಸಮಾನತೆ ಹಾಗು ಕ್ಷೋಭೆಯಿಂದ ಬಳಲುತ್ತಲೇ ಇತ್ತು.
ಅಲ್ಲಿ ಯಾವುದೇ ಸಮೂದಾಯದವಯರು ಯಾವುದೇ ದೈವತಾ ಕಾರ್ಯ ಮಾಡಲು ಹೊರಟರೂ ದಿಕ್ಕುದೆಸೆಯಿಲ್ಲದ ನಾಗ ಹಾಗೂ ದೈವಗಳ ವಿಚಾರವೇ ಬರುತ್ತಿತ್ತು. ಹಾಗಾಗಿ ದಿಕ್ಕಾ ಪಾಲಾಗಿದ್ದ ಕದ್ರಿ ಬಂಜನ್ ಮೂಲದವರನ್ನು 13 ವರ್ಷದ ಹಿಂದೆ ಒಟ್ಟು ಸೇರಿಸಿ, ನಾಗ ಹಾಗು ದೈವಗಳಿಗೆ ಗುಡಿಕಟ್ಟಲಾಯಿತು. ಪುನಃ ಕೋಟಿ ಮೂಲ್ಯರ ಕುಟುಂಬಿಕರು ಅಲ್ಲಿ ಸ್ವಲ್ಪ ಜಾಗ ಖರೀದಿಸಿ ನೆಲೆ ನಿಂತು ಈಗ 12 ವರ್ಷದ ಬಳಿಕ ಬ್ರಹ್ಮ ಕಲಶೋತ್ಸವದ ಸಂಭ್ರಮ