ಮಂಗಳೂರು : ಫೆ. ೨೦ರಂದು ನಡೆದ ದ.ಕ ಹಾಗೂ ಉಡುಪಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಮತ ಎಣಿಕೆ ಇಂದು (ಫೆ.೨೩) ನಡೆದಿದ್ದು, ಕುಲಾಲ ಸಮಾಜದ ಒಟ್ಟು ಆರು ಅಭ್ಯರ್ಥಿಗಳು ವಿಜಯ ಸಾಧಿಸಿದ್ದಾರೆ.
ಜಿಲ್ಲಾ ಪಂಚಾಯತ್ ಸದಸ್ಯರಾಗಿ ಇಬ್ಬರು ಹಾಗೂ ತಾಲೂಕು ಪಂಚಾಯತ್ ಗೆ ನಾಲ್ವರು ಆಯ್ಕೆಯಾಗಿದ್ದಾರೆ. ವಿಶೇಷವೆಂದರೆ ಜಯ ಸಾಧಿಸಿದ ಎಲ್ಲರೂ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳಾಗಿದ್ದಾರೆ.
ಬಿಜೆಪಿಯಿಂದ ಕಟೀಲು ಜಿ. ಪಂ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಸ್ತೂರಿ ಪಂಜ ಹಾಗೂ ಹಾಲಾಡಿ ಜಿ.ಪಂನಿಂದ ಸ್ಪರ್ಧಿಸಿದ್ದ ಸುಪ್ರೀತಾ ಉದಯ ಕುಲಾಲ್ ಜಯಗಳಿಸಿದ್ದಾರೆ.
ತಾಲೂಕು ಪಂಚಾಯತ್ ಚುನಾವಣೆಗೆ ಬಿಜೆಪಿಯಿಂದ ಮುಂಡ್ಕೂರು ಕ್ಷೇತ್ರದಿಂದ ಗೋಪಾಲ ಮೂಲ್ಯ, ಮಿಯ್ಯಾರು ಕ್ಷೇತ್ರದಿಂದ ಪ್ರಮೀಳಾ ಆನಂದ ಮೂಲ್ಯ, ನಡ ಕ್ಷೇತ್ರದಿಂದ ವೇದಾವತಿ , ಮಡಂತ್ಯಾರು ಕ್ಷೇತ್ರದಿಂದ ವೇದಾವತಿ ಸ್ಪರ್ಧಿಸಿ ಜಯಗಳಿಸಿದ್ದು , ಎಲ್ಲರೂ ಚೊಚ್ಚಲ ಬಾರಿ ತಾಪಂ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ದ.ಕ ಹಾಗೂ ಉಡುಪಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ವಿವಿಧ ಪಕ್ಷಗಳಿಂದ ಕುಲಾಲ ಸಮಾಜದ ಒಟ್ಟು 18 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಕಾರ್ಯಕರ್ತರ ಜೊತೆ ಕಸ್ತೂರಿ ಪಂಜ ಗೆಲುವಿನ ನಗೆ
ಶಾಸಕ ಸುನಿಲ್ ಕುಮಾರ್ ಜೊತೆ ಪ್ರಮೀಳ ಆನಂದ ಮೂಲ್ಯ (ನಿಂತವರಲ್ಲಿ ಎಡದಿಂದ ಎರಡನೆಯವರು)