ಮಂಗಳೂರು : ಕರಾವಳಿ ಕುಲಾಲ ಕುಂಬಾರ ಯುವವೇದಿಕೆಯ ಕೇಂದ್ರ ಸಮಿತಿಯ ಆಶ್ರಯದಲ್ಲಿ ನಡೆದ ಪ್ರತಿಷ್ಠಿತ ಸರ್ವಜ್ಞ ಟ್ರೋಫಿ-2016 ಕ್ರಿಕೆಟ್ ಪಂದ್ಯಾಟದಲ್ಲಿ ಕುಂದಾಪುರ ಯುವವೇದಿಕೆ ತಂಡ ಎರಡನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ.
ಇತ್ತೀಚೆಗೆ ನಿಧನರಾದ ಕುಲಾಲ ಸಮಾಜದ ಮುಖಂಡ ಎಂ ಆರ್ ನಾರಾಯಣ ಅವರ ಸ್ಮರಣಾರ್ಥ ಫೆಬ್ರವರಿ 21ರಂದು ಕರಾವಳಿ ಕುಲಾಲ/ಕುಂಬಾರ ಯುವವೇದಿಕೆಯ ಕೇಂದ್ರ ಸಮಿತಿಯ ಆಶ್ರಯದಲ್ಲಿ ಸರ್ವಜ್ಞ ಟ್ರೋಫಿ-2016 ಕೆಪಿಟಿ ಮೈದಾನದಲ್ಲಿ ಹಮ್ಮಿಕೊಂಡಿತ್ತು. ಅಣ್ಣಯ್ಯ ಕುಲಾಲ್ ಅಧ್ಯಕ್ಷತೆಯಲ್ಲಿ, ಖ್ಯಾತ ಕ್ರಿಕೇಟರ್, ಚಕ್ರವರ್ತಿ ಕ್ರಿಕೇಟ್ ಕ್ಲಬ್ ನ ಮನೋಜ್ ನಾಯರ್ ಕುಂದಾಪುರ ಅವರು ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿದ್ದು, ಮುಖ್ಯ ಅತಿಥಿಗಳಾಗಿ ಗಂಗಾಧರ ಬಂಜನ್, ಮೋಹಿತ್ ಕುಲಾಲ್ ಬಿಜೈ ಮುಂತಾದವರು ಉಪಸ್ಥಿತರಿದ್ದರು. ಕ್ರಿಕೆಟ್ ಪಂದ್ಯಾಟದಲ್ಲಿ ಅವಿಭಜಿತ ದಕ ಜಿಲ್ಲೆಯ 15 ವಿಧಾನ ಸಭಾ ಕ್ಷೇತ್ರಗಳ ತಂಡಗಳು ಹಾಗೂ ಕರಾವಳಿಯ ಎಲ್ಲಾ ಕುಲಾಲ ಸಂಘಗಳ ಯುವನಾಯಕರು ಭಾಗಿಯಾಗಿದ್ದರು.