ದ. ಕ ಜಿಲ್ಲಾಡಳಿತದಿಂದ ೨ನೇ ವರ್ಷದ ಸರ್ವಜ್ಞ ಜಯಂತಿ ಆಚರಣೆ
ಮಂಗಳೂರು : ಮಂಗಳೂರಿನಲ್ಲಿ ಜರುಗಿದ ಸರ್ವಜ್ಞ ಜಯಂತಿಯಲ್ಲಿ ಸ್ವತಂತ್ರ ಕುಂಭ ನಿಗಮ ಹಾಗು ಸರ್ವಜ್ಞ ಅಧ್ಯಯನ ಪೀಠವನ್ನು ಕುಂಬಾರರಿಗೆ ಒದಗಿಸಿ ಸಾಮಾಜಿಕ ನ್ಯಾಯವನ್ನು ಒದಗಿಸುವಂತೆ ಸರಕಾರವನ್ನು ಒತ್ತಾಯಿಸಲಾಯಿತು.
ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದ ಕರಾವಳಿಯ ಕುಲಾಲ ಕುಂಬಾರ ಯುವವೇದಿಕೆಯ ಸ್ಥಾಪಕ ಅಧ್ಯಕ್ಷರೂ, ರಾಜ್ಯ ಕುಂಬಾರ ಸಂಘದ ಕಾರ್ಯಾದ್ಯಕ್ಷರೂ ಆದ ಡಾ.ಎಂ.ಅಣ್ಣಯ್ಯ ಕುಲಾಲ್ ಉಳ್ತೂರು ಮಾತನಾಡಿ, ಕೇವಲ ಸರ್ವಜ್ಞ ಜಯಂತಿ ಆಚರಣೆಯಿಂದ ಕುಂಬಾರರಿಗೆ ದೊಡ್ಡ ಲಾಭವಾಗಿಲ್ಲ. ಆಚರಣೆಯನ್ನು ನಾವು ಹೋರಾಟದಿಂದಲೇ ಸರಕಾರಗಳ ಕಿವಿ ಹಿಂಡಿ ಪಡೆದದ್ದು. ಅಂತೆಯೇ ಸ್ವತಂತ್ರ ಸರ್ವಜ್ಞ ಅಧ್ಯಯನ ಪೀಠ ಹಾಗೂ ಕುಂಭ ನಿಗಮ ಸಿಗುವವರೆಗೆ ಅದಕ್ಕೆ ಕುಂಬಾರರನ್ನೇ ಮುಖ್ಯಸ್ಥರನ್ನಾಗಿ ನೇಮಿಸಿ ಕುಂಬಾರರಿಗೆ ಸಾಮಾಜಿಕ ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲದು. ಮುಂದಿನ ವರ್ಷಗಳಲ್ಲಿ ಕರಾವಳಿಯ ಸರ್ವಜ್ಞ ಜಯಂತಿ ಆಚರಣೆಯನ್ನು ಕುಲಾಲ ಕುಂಬಾರ ಯುವವೇದಿಕೆ ನೇರವಾಗಿ ವಹಿಸಿಕೊಂಡು ಮುಂಚೂಣಿಯಲ್ಲಿ ನಿಂತು ನಡೆಸಲಿದೆ. ಜಿಲ್ಲಾಡಳಿತ ನಮ್ಮೂಂದಿಗೆ ಸಹಕರಿಸಬೇಕೆಂದರು.
ಸರ್ವಜ್ಞ ಸಂದೇಶವನ್ನು ಕೊಡುತ್ತಾ ಮಾತನಾಡಿದ ಹಿರಿಯ ಪತ್ರಕರ್ತ, ಸಾಹಿತಿ ಚಿದಂಬರ ಬೈಕಂಪಾಡಿ ಸರ್ವಜ್ಞ ಹಾಗೂ ಅವರ ಸಂದೇಶಗಳು ಯುವಕರು ಹಾಗೂ ವಿದ್ಯಾರ್ಥಿಗಳನ್ನು ಮುಟ್ಟಬೇಕು. ಅದಕ್ಕಾಗಿ ಮುಂಬರುವ ವರ್ಷಗಳಲ್ಲಿ ಸರ್ವಜ್ಞ ಜಯಂತಿ ಶಾಲಾ ಕಾಲೇಜುಗಳಲ್ಲಿ ಆಚರಿಸಬೇಕು. ಸರ್ವಜ್ಞ ಜಯಂತಿಯನ್ನು ಹೋರಾಟದ ಮೂಲಕ ಕುಂಬಾರ ಸಮುದಾಯಕ್ಕೆ ತಂದ ಸರ್ವರಿಗೂ ಅಭಿನಂದನೆ ಸಲ್ಲಬೇಕು ಅಂದರು.
ಯುವವೇದಿಕೆಯ ಗಂಗಾಧರ್ ಬಂಜನ್ ಕನ್ನಡ ಸಂಸ್ಕ್ರತಿ ಇಲಾಖೆಯ ಚಂದ್ರಹಾಸ ರೈ. ಕರಾವಳಿಯ ಕುಲಾಲ ಕುಂಬಾರ ಹಿರಿ ಕಿರಿಯ ನಾಯಕರುಗಳು ಮಹಿಳಾ ನಾಯಕರುಗಳು. ಯುವವೇದಿಕೆ ಹಾಗೂ ಕುಲಾಲ ಮಾತೃ ಸಂಘದ ಹಿರಿಯ ಪದಾಧಿಕಾರಿಗಳು ಭಾಗವಹಿಸಿದ್ದರು. ಕರಾವಳಿಯಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಕರಾವಳಿಯ ಎಲ್ಲಾ ಮಂತ್ರಿಗಳು ಶಾಸಕರು ಹಾಗೂ ಸಂಸದರ ಅನುಪಸ್ಥಿತಿಯಲ್ಲಿ. ಜಿ. ಪ ಕಾರ್ಯನಿರ್ವಹಣಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಕುಂಬಾರ ಸಂಘಗಳು ಸರಕಾರಕ್ಕೆ ವಿನಂತಿಸಿಕೊಂಡಂತೆ ಸರ್ವಜ್ಞ ಜಯಂತಿಯನ್ನು ಚುನಾವಣೆಯ ತರಾತುರಿಯ ನಡುವೆಯೇ ಆಚರಿಸಲಾಯಿತು.