ಮಂಗಳೂರು : ಫೆ. ೨೦ರಂದು ನಡೆಯಲಿರುವ ದ.ಕ ಹಾಗೂ ಉಡುಪಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ವಿವಿಧ ಪಕ್ಷಗಳಿಂದ ಕುಲಾಲ ಸಮಾಜದ ಒಟ್ಟು 18 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ ಐವರು ಅಭ್ಯರ್ಥಿಗಳು ಜಿಲ್ಲಾ ಪಂಚಾಯತ್ ಗೆ ಸ್ಪರ್ಧಿಸಿದ್ದರೆ, ಉಳಿದ 13 ಮಂದಿ ತಾಲೂಕು ಪಂಚಾಯತ್ ಚುನಾವಣೆ ಎದುರಿಸುತ್ತಿದ್ದಾರೆ.
ಬಿಜೆಪಿಯಿಂದ ಕಟೀಲು ಜಿ. ಪಂ ಅಭ್ಯರ್ಥಿಯಾಗಿ ಕಸ್ತೂರಿ ಪಂಜ, ಕುರ್ನಾಡು ಜಿ.ಪಂ ಅಭ್ಯರ್ಥಿಯಾಗಿ ಶಕೀಲ ಕುಲಾಲ್ ಕಣದಲ್ಲಿದ್ದರೆ, ಕಾಂಗ್ರೆಸ್ ನಿಂದ ಸುಪ್ರೀತಾ ಕುಲಾಲ್ ಹಾಲಾಡಿ ಜಿ.ಪಂನಿಂದ ಹಾಗೂ ಸಿಪಿಐಎಂನಿಂದ ರಾಮಕೃಷ್ಣ ಕುಲಾಲ್ ಕೊಳ್ನಾಡು ಕ್ಷೇತ್ರದಿಂದ, ರೋಹಿಣಿ ಭೋಜ ಮೂಲ್ಯ ಲಾಯಿಲ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇನ್ನು ತಾಲೂಕು ಪಂಚಾಯತ್ ಗೆ ಕಾಂಗ್ರೆಸ್ ನಿಂದ ಬೈರಂಪಳ್ಳಿ ಕ್ಷೇತ್ರದಿಂದ ಪ್ರಫುಲ್ಲ ಕುಲಾಲ್ , ಬಳ್ಕುಂಜೆ ಕ್ಷೇತ್ರದಿಂದ ಸುಜಾತಾ ಮೂಲ್ಯ , (ಕಾಪು) ಕಳತ್ತೂರು ಕ್ಷೇತ್ರದಿಂದ ರೇಖಾ ಕುಲಾಲ್, ಮೊಳಹಳ್ಳಿ ಕ್ಷೇತ್ರದಿಂದ ಸವಿತಾ ಕುಲಾಲ್ ಸ್ಪರ್ಧೆಯಲ್ಲಿದ್ದಾರೆ.
ಬಿಜೆಪಿಯಿಂದ ತಾಲೂಕು ಪಂಚಾಯತ್ ಗೆ ವಸಂತಿ ಮಡಂತ್ಯಾರು ಕ್ಷೇತ್ರದಿಂದ , ವೇದಾವತಿ ನಡ ಕ್ಷೇತ್ರದಿಂದ , ಗೋಪಾಲ ಮೂಲ್ಯ ಮುಂಡ್ಕೂರು ಕ್ಷೇತ್ರದಿಂದ, ಪ್ರಮೀಳಾ ಆನಂದ್ ಮೀಯಾರು ಕ್ಷೇತ್ರದಿಂದ, ಶಾರದಾ ಕುಲಾಲ್ ಉಳಾಯಿಬೆಟ್ಟು ಕ್ಷೇತ್ರದಿಂದ, ಪಂಜಿಕಲ್ಲು ಕ್ಷೇತ್ರದಿಂದ ಶೈಲಜಾ ವಿ. ಸಾಲ್ಯಾನ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಸಿಪಿಐಎಂನಿಂದ ಕರೋಪಾಡಿ ಕ್ಷೇತ್ರದಿಂದ ಅಣ್ಣು ಮೂಲ್ಯ , ಮುನ್ನೂರು ಕ್ಷೇತ್ರದಿಂದ ಶಶಿಕಲಾ ಕುಲಾಲ್ , ಧರ್ಮಸ್ಥಳ ಕ್ಷೇತ್ರದಿಂದ ವೇದಾವತಿ ಚುನಾವಣೆ ಎದುರಿಸುತ್ತಿದ್ದಾರೆ.