ಮಂಗಳೂರು : ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ನವಜಾತ ಶಿಶುವಿನ ಚಿಕಿತ್ಸೆಗೆ `ಕುಲಾಲ್ ವರ್ಲ್ಡ್ ಡಾಟ್ ಕಾಂ’ನ ವಾಟ್ಸ್ ಆಪ್ ಗ್ರೂಪಿನ ಸದಸ್ಯರು ಧನ ಸಂಗ್ರಹಿಸಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕುಲಾಲ್ ವರ್ಲ್ಡ್, ದೋಹಾ ಕುಲಾಲ್ಸ್ ಹಾಗೂ ಬೆಹರೈನ್ ಕುಲಾಲ ಮಿತ್ರರು ಜಂಟಿಯಾಗಿ ಸಂಗ್ರಹಿಸಿದ ಒಟ್ಟು ರೂ. ###ಯನ್ನು ಫೆ. 17ರಂದು ಮಗುವಿನ ಪೋಷಕರಿಗೆ ಹಸ್ತಾಂತರಿಸಿದರು.
`ಕುಲಾಲ್ ವರ್ಲ್ಡ್ ಡಾಟ್ ಕಾಮ್’ನ ಮನವಿಗೆ ಸ್ಪಂದಿಸಿ ಮಾನವೀಯ ನೆಲೆಯಲ್ಲಿ ಹಣ ಸಂದಾಯ ಮಾಡಿದವರ ವಿವರ :
01. ದೋಹಾ ಕುಲಾಲ್ ಫ್ರೆಂಡ್ಸ್ : 25,009-00
02.ಬೆಹರೈನ್ ಕುಲಾಲ್ ಫ್ರೆಂಡ್ಸ್ : 25,000-00
03. ನಿತ್ಯಾನಂದ ಕುಲಾಲ್, ಮೂಡಬಿದಿರೆ : 500-00
04. ರೋಶನ್ ಕುಲಾಲ್, ಕಾವೂರು : 2000-00
05. ಪದ್ಮನಾಭ ಕುಲಾಲ್, ಮುಂಬಯಿ : 1000-00
06. ರಂಜಿತ್ ಕುಲಾಲ್ ಬಜಪೆ : 500-00
07. ರಮೇಶ್ ಕುಲಾಲ್ ಬಂಟ್ವಾಳ : 500-00
08. ಸಂತೋಷ್ ಕುಲಾಲ್ ಮಂಜೇಶ್ವರ : 500-00
09. ದಕ್ಷ್ ಪುರಂದರ ಕುಲಾಲ್ , ತೋಕೂರು : 1000-00
10. ಗಣೇಶ್ ಕುಲಾಲ್ , ಪೆರ್ಡೂರು : 1000-00
11. ರಂಜಿತ್ ಕುಲಾಲ್, ಸೌದಿ ಅರೇಬಿಯಾ : 750-00
12. ದೀಕ್ಷಿತ್ ಕುಲಾಲ್, ಮೂಡಬಿದ್ರಿ : 250-00
13. ಮೋಹನ್ ಬಂಜನ್ , ಬಜಪೆ : 500-00
14. ಸೂರಜ್ ಕುಲಾಲ್, ಮಂಗಳೂರು : 1600-00
15. ರಿತೇಶ್ ಕುಲಾಲ್, ಬಜಪೆ : 2000-00
16. ಸಂತೋಷ್ ಕುಲಾಲ್, ತಲಪಾಡಿ : 500-00
17. ಅನಾಮಿಕ… : 1000-00
18. ಜೀವನ್ ಬಂಜನ್, ಕೃಷ್ಣಾಪುರ : 300-00
19. ದಿನೇಶ್ ಬೀಡು , ವರ್ಕಾಡಿ : 250-00
20. ಭುವನ್ ಕುಲಾಲ್, ದುಬೈ : 1000-00
21. ಕಿಶೋರ್ ಕುಲಾಲ್, ಕುಂಬ್ಳೆ : 500-00
22. ನವೀನ ಕುಮಾರ್, ಕೈರಂಗಳ : 100-00
23. ಸಂದೇಶ್ ಸಾಲ್ಯಾನ್ , ಪಕ್ಷಿಕೆರೆ : 500-00
24. ಧೀರಜ್ ಕುಲಾಲ್, ಬಂಟ್ವಾಳ : 500-00
25. ಅನಾಮಿಕ : 2000-00
26. ಪ್ರಶಾಂತ್ ಬಿ ಬಂಗೇರ, ಮುಂಬಯಿ : 500-00
27. ಮುಖೇಶ್ ಕುಲಾಲ್, ಸೌದಿ ಅರೇಬಿಯಾ : 1000-00
28. ಅಶೋಕ್ ಕುಲಾಲ್ ಕುಂಬ್ಳೆ, ಕತಾರ್ : 1000-00
29. ರಾಜೇಶ್ (ಉ.ಪ್ರ), ಸೌದಿ ಅರೇಬಿಯಾ : 1075-00
30. ಕೆ ಹೇಮರಾಜ್ ಕುಲಾಲ್ , ವಿಟ್ಲ : 200-00
31. ಹೇಮಂತ್ ಕುಮಾರ್, ಕಿನ್ನಿಗೋಳಿ : 666-00
ಒಟ್ಟು ಸಂಗ್ರಹವಾದ ಮೊತ್ತ :
ದೇಣಿಗೆ ನೀಡಿದ ಉದಾರ ಹೃದಯಿ ಯು.ಪಿ ಕಾರ್ಮಿಕ
ಸೌದಿ ಅರೇಬಿಯಾದಂತಹ ಕಡು ಬಿಸಿಲ ನಾಡಿನಲ್ಲಿ ದುಡಿಯುವ ಉತ್ತರ ಪ್ರದೇಶದ ಕಾರ್ಮಿಕರೊಬ್ಬರು ಮಗುವಿನ ಚಿಕಿತ್ಸೆಯ ಬಗ್ಗೆ ತಿಳಿದು ಧನ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಕುಲಾಲ್ ವರ್ಲ್ಡ್ ನ ನಿರ್ವಾಹಕರಲ್ಲೊಬ್ಬರಾದ ರಂಜಿತ್ ಕುಮಾರ್ ಸೌದಿ ಅರೇಬಿಯಾದಲ್ಲಿದ್ದು, ಅಲ್ಲಿಯ ಚಹಾ ಅಂಗಡಿಗೆ ತೆರಳಿ ತಮ್ಮ ಪರಿಚಯಸ್ಥ ಕೂಲಿ ಕಾರ್ಮಿಕ ರಾಜೇಶ್ ಅವರಲ್ಲಿ ಮಾತನಾಡುತ್ತಾ ಇದ್ದಾಗ, ಮಾತಿನ ಮಧ್ಯೆ ತಮ್ಮ ವಾಟ್ಸಪ್ ಬಳಗ ಪುಟ್ಟ ಮಗುವಿನ ಚಿಕಿತ್ಸೆಗಾಗಿ ಹಣ ಸಂಗ್ರಹ ಮಾಡುತ್ತಿರುವ ಕುರಿತು ಹೇಳಿದರು. ಮಗುವಿನ ಸ್ಥಿತಿ ಬಗ್ಗೆ ತಿಳಿದು ಮರುಗಿದ ರಾಜೇಶ್ , ಕೂಡಲೇ ತನ್ನ ಕಿಸೆಯಿಂದ ರಿಯಾಲ್ (1075 ರೂ.) ನೀಡಿ, `ಮಗುವಿನ ಚಿಕಿತ್ಸೆಗೆ ಉಪಯೋಗವಾಗಲಿ, ಮಗು ಶೀಘ್ರ ಗುಣಮುಖವಾಗಲಿ’ ಎಂದು ಹಾರೈಸಿದ್ದಾರೆ.