ಕಾರ್ಕಳ: ಅನಾರೋಗ್ಯಕ್ಕೊಳಗಾಗಿ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ನಿಗೂಢ ರೀತಿಯಲ್ಲಿ ನಾಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.
ಮೂಡಬಿದ್ರಿ ನೆಲ್ಲಿಕಾರು ಮಂಟ್ರಾಡಿ ಪೆರಲ್ತಾಡಿ ಮನೆಯ ಮಹಾಬಲ ಕುಲಾಲ್ (38) ನಾಪತ್ತೆಯಾದವರು.
ಫೆಬ್ರವರಿ 9ರಂದು ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದವರು ಮರುದಿನ ಸಂಜೆ 4.30ಕ್ಕೆ ಆಸ್ಪತ್ರೆಯ ವಾರ್ಡಿನಿಂದ ಬಲವಂತವಾಗಿ ಎದ್ದು ಹೊರ ಹೋಗಿದ್ದರು.
ಮನೆಗೂ ತಲುಪದೇ ಸಂಬಂಧಿಕರ ಮನೆಗೂ ಹೋಗದೇ ಆಸ್ಪತ್ರೆಗೆ ಹಿಂತಿರುಗದೇ ಇದ್ದುದರಿಂದ ಅವರ ಪತ್ನಿ ಸುಶೀಲ ಈ ಬಗ್ಗೆ ನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಆಸ್ಪತ್ರೆಗೆ ದಾಖಲಾಗಿದ್ದ ಮಹಾಬಲ ಕುಲಾಲ್ ನಿಗೂಢ ಕಾಣೆ
Kulal news
1 Min Read