ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಕುಂಭ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮ
ಮಂಗಳೂರು : ದೇವತಾ ಕಾರ್ಯಗಳಿಗೆ ಸಹಾಯ ಮಾಡಿದರೆ ದೇವರ ಅನುಗ್ರಹ ಖಂಡಿತಾ ಸಾಧ್ಯ ಎಂದು ವಜ್ರದೇಹಿ ಮಠಾಧೀಶ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಹೇಳಿದರು.
ಕುಂಭ ಮಹೋತ್ಸವದ ಅಂಗವಾಗಿ ಕುಲಶೇಖರ ಶ್ರೀ ವೀರ ನಾರಾಯಣ ದೇವಸ್ಥಾನದಲ್ಲಿ ನಿನ್ನೆ (ಫೆ.೧೨) ಸಂಜೆ ಜರುಗಿದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ದೇವತಾ ಕಾರ್ಯಕ್ಕೆ ಎಲ್ಲರೂ ಸಹಕರಿಸಿ ದೇವರ ಸೇವೆ ಮಾಡಿ ಕೃತಾರ್ಥರಾಗಿ ಎಂದರು.
ಕೆನರಾ ಹೆಣ್ಮಕ್ಕಳ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕೆ.ಸಿ.ಲೀಲಾವತಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ಕೃಷ್ಣ ಶಿವಕೃಪಾ ಕುಂಜತ್ತೂರು ಮಾತಾನಾಡಿ, ಕುಲಾಲ ಸಮುದಾಯವು ತನ್ಮಯ ಹೊಂದಿರುವ ಸಮುದಾಯ ಇಂತಹ ಸಮಾಜಕ್ಕೆ ದೇವರ ಸೇವೆ ಮಾಡುವ ಭಾಗ್ಯ ಬಂದಿರುವುದು ಬಹಳ ಸಂತಸ ತಂದಿದೆ ಎಂದು ನುಡಿದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು
ಕಾರ್ಯಕ್ರಮದಲ್ಲಿ ಶ್ರೀ ನಾಗಬೃಹ್ಮ ಕ್ಷೇತ್ರ, ಕಲ್ಲುರ್ಟಿ ಕಲ್ಕುಡ ದೈವಸ್ಥಾನದ ಅಧ್ಯಕ್ಷರಾದ ಶ್ರೀ ಲೋಕನಾಥ ಜಿ ಶೆಟ್ಟಿ , ಶ್ರೀ ಜಿ.ಎಸ್ ಗಂಗಾಧರ, ಶ್ರೀ ಜಿ.ಎ.ರಾಯ್ಕರ್, ಶ್ರೀ ಅನಿಲ್ ಕೆ. ರಾವ್, ಶ್ರೀ ಯಜ್ಞೇಶ್ ಬರ್ಕೆ, ಶ್ರೀ ಆನಂದ ಬಂಜನ್ , ದೇವಸ್ಥಾನದ ಮೊಕ್ತೇಸರರಾದ ಶ್ರೀ ಪುರುಷೋತ್ತಮ ಕುಲಾಲ್ ಕಲ್ಬಾವಿ, ದೇವಸ್ಥಾನದ ಜೀರ್ಣೋಧ್ದಾರ ಸಮಿತಿ ಅಧ್ಯಕ್ಷರಾದ ಶ್ರೀ ದಾಮೋಧರ ಎ., ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷರಾದ ಶ್ರೀ ರಾಜೇಶ್ ಕುಮಾರ್ ಅಡ್ಯಾರ್ ಕಟ್ಟೆ, ದ.ಕ.ಜಿಲ್ಲಾ ಸಂಘದ ಅಧ್ಯಕ್ಷರಾದ ಶ್ರೀ ರಾಜೇಂದ್ರ ಕುಮಾರ್ ಅಳಪೆ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದೇವಸ್ಥಾನದ ಕಾರ್ಯದರ್ಶಿ ಶ್ರೀ ರವೀಂದ್ರ ಮುನ್ನಿಪ್ಪಾಡಿ ಸ್ವಾಗತಿಸಿ, ದೇವಸ್ಥಾನದ ಮುಕ್ತೇಸರರಾದ ಗೋಪಾಲ್ ಸಾಲ್ಯಾನ್ ರವರು ಪ್ರಸ್ತಾವನೆಗೈದರು. ಗೀತಾ ಮನೋಜ್ ಮರೋಳಿಯವರು ವಂದಿಸಿ, ಸಂತೋಷ ಕುಮಾರ್ ಸಿದ್ದಕಟ್ಟೆ ರವರು ಕಾರ್ಯಕ್ರಮ ನಿರೂಪಿಸಿದರು.