ಮಂಗಳೂರು : ಕುಂಬಾರ/ಕುಲಾಲ ಸಂಘಟನೆಗಳ ವಿವಿಧ ಹೋರಾಟದಿಂದ ಪಡೆದ ಕುಂಬಾರ ಕವಿ ಸರ್ವಜ್ಞ ಜಯಂತಿಯನ್ನು ಫೆ.20 ರಂದು ಆಚರಿಸಲು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸರಕಾರ ಸುತ್ತೋಲೆ ಕಳಿಸಿದೆ.
ಆಯಾಯ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಜೊತೆಗೂಡಿ ರಾಜ್ಯ ಕುಂಬಾರ ಕುಲಾಲ ಜಿಲ್ಲಾ ಶಾಖೆ ಹಾಗು ತಾಲೂಕು ಶಾಖೆಗಳು ಕವಿ ಸರ್ವಜ್ಞ ಜಯಂತಿಯನ್ನುಆಚರಿಸಬೇಕು. ಇದು ಕುಂಬಾರ ಸಮುದಾಯಕ್ಕೆ ದೊರೆತ ಮಹಾನ್ ಗೌರವ. ಇದೇ ವಾರದಲ್ಲಿ ಜಿಲ್ಲಾಧಿಕಾರಿ, ತಹಸೀಲ್ಧಾರರು ಹಾಗೂ ಕನ್ನಡ ಸಂಸ್ಕ್ರತಿ ಇಲಾಖಾ ಮುುಖ್ಯಸ್ಥರನ್ನ ಸಂಪರ್ಕಿಸಿ ಸರ್ವಜ್ಞ ಜಯಂತಿಯನ್ನು ಆಚರಿಸಿ ಕುಂಬಾರರ ಶಕ್ತಿಯನ್ನು ತೋರಿಸಬೇಕಾಗಿ ಕುಂಬಾರ ಸಮುದಾಯದ ಪರವಾಗಿ ವಿನಂತಿಸಿಕೊಳ್ಳಲಾಗಿದೆ ಎಂದು ರಾಜ್ಯ ಕುಂಬಾರ ಸಂಘ ಬೆಂಗಳೂರು ಇದರ ಕಾರ್ಯಾಧ್ಯಕ್ಷ ಹಾಗೂ ಕರಾವಳಿ ಕುಲಾಲ ಕುಂಬಾರರ ಯುವವೇದಿಕೆ ಸ್ಥಾಪಕ ಡಾ.ಎಂ.ಅಣ್ಣಯ್ಯ ಕುಲಾಲ್ ಉಳ್ತೂರು ತಿಳಿಸಿದ್ದಾರೆ.
ಸಂಘಟನೆ ಹಾಗೂ ಸಾಮಾಜಿಕ ನ್ಯಾಯದ ಹಕ್ಕೊತ್ತಾಯಕ್ಕಾಗಿ ಸರ್ವಜ್ಞ ಟ್ರೋಫಿ- 2016 ಆಯೋಜನೆ
ಕ್ರೀಡಾ ಸಾಂಸ್ಕ್ರತಿಕ ಕಾರ್ಯಕ್ರಮಗಳ ಮೂಲಕ ಕರಾವಳಿಯಲ್ಲಿ ಚದುರಿ ಹೋಗಿರುವ ಸುಮಾರು 3 ಲಕ್ಷ ಕುಲಾಲ/ಕುಂಬಾರ ಬಂಧುಗಳು ಹಾಗೂ ಯುವಕರನ್ನು ಸಂಘಟಿಸಿ , ಸಾಮಾಜಿಕ ಹಾಗೂ ರಾಜಕೀಯ ನ್ಯಾಯದ ಬಗ್ಗೆ ಹಕ್ಕೊತ್ತಾಯ ಮಾಡುತ್ತಲೇ ಬಂದಿರುವ ಕರಾವಳಿ ಕುಲಾಲ/ಕುಂಬಾರ ಯುವವೇದಿಕೆಯು ಎಂದಿನಂತೆ ಈ ಬಾರಿ ದಿನಾಂಕ 21-02-2016ನೇ ಬಾನುವಾರ ನಗರದ ಕೆ.ಪಿ.ಟಿ ಮೈದಾನದಲ್ಲಿ ಅವಿಭಜಿತ ದ.ಕ ಜಿಲ್ಲೆಯ ಆಹ್ವಾನಿತ 15 ವಿಧಾನಸಭಾ ವ್ಯಾಪ್ತಿಯ ಯುವ ತಂಡಗಳ ನಡುವೆ ಕ್ರಿಕೇಟ್ ಪಂದ್ಯಾಟವನ್ನು ಆಯೋಜಿಸಲಾಗಿದೆ. ಅಗಲಿದ ಧೀಮಂತ ನಾಯಕ ಎಂ.ಆರ್.ನಾರಾಯಣರವರ ಸ್ಮರಣಾರ್ಥವಾಗಿ ಸರ್ವಜ್ಞ ಟ್ರೋಫಿ 2016 ಎಂಬ ಹೆಸರಿನಲ್ಲಿ ನೆಡೆಯಲ್ಲಿದ್ದು , ಈ ಮೂಲಕ ಎಂದಿನಂತೆ ಕರಾವಳಿಯ ಕುಲಾಲ/ಕುಂಬಾರ ಯುವಕರನ್ನು ಸಂಘಟಿಸಿ ರಾಜಕೀಯ ಸ್ಥಾನಮಾನಗಳಿಗಾಗಿ ಒತ್ತಾಯಿಸಲಾಗುವುದು.
ಈ ಬಾರಿಯ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಕೆಲವು ರಾಜಕೀಯ ಪಕ್ಷಗಳ ಸುಮಾರು 3 ಲಕ್ಷ ಜನಸಂಖ್ಯೆಯಷ್ಟಿರುವ ಕುಲಾಲರಿಗೆ ಸೀಟನ್ನು ನೀಡಿದರೂ ಸಹಾ, ಕೆಲವು ರಾಷ್ಟ್ರೀಯ ಪಕ್ಷಗಳು ಗುರುಪುರ ,ಸುರತ್ಕಲ್ , ಬಂಟ್ವಾಳ , ಬೆಳ್ತಂಗಡಿ , ಪುತ್ತೂರು , ಕಾಪು ಉಡುಪಿ , ಕುಂದಾಪುರಗಳಲ್ಲಿ ಪಕ್ಷಕಾಗಿ ಬೆವರು ಸುರಿಸಿದ ಕುಲಾಲ ನಾಯಕರನ್ನು ಜಿಲ್ಲಾ ಪಂಚಾಯತ್ ಸ್ಥಾನವನ್ನು ಕಡಗಣಿಸಿ ಸೀಟನ್ನು ನಿರಾಕರಿಸಿದೇ. ಇದನ್ನು ಕುಲಾಲಯುವ ವೇದಿಕೆ ಪ್ರಬಲವಾಗಿ ಖಂಡಿಸುತ್ತದೆ. ಮುಂಬರುವ ದಿನಗಳಲ್ಲಿ ಇಂತಹ ರಾಷ್ಟ್ರೀಯ ಪಕ್ಷಗಳು ಕುಲಾಲ/ಕುಂಬಾರ ಸಮುದಾಯದ ಅಸಹಕಾರಕ್ಕೆ ಒಳಗಾಗಲಿದೆ. ದುಡಿಸಿಕೊಂಡು ,ಅಧಿಕಾರದ ವಿಷಯ ಬಂದಾಗ ಮರೆತು ಬಿಡುವ ರಾಜಕಾರಣಿಗಳಿಗೆ ತಕ್ಕಪಾಠವನ್ನು ಕಲಿಸಲಾಗುವುದು ಎಂದು ಕುಲಾಲ/ಕುಂಬಾರ ಯುವವೇದಿಕೆ ಕೇಂದ್ರ ಸಮಿತಿಯ ಪ್ರಕಟಣೆ ತಿಳಿಸಿರುತ್ತದೆ .