ಕಳೆದ ಸಾಲಿನ ಪಿಯೂಸಿ ಫಲಿತಾಂಶದಲ್ಲಿ ಮಂಗಳೂರಿನ ಶಾರದಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ಮನ್ವಿತಾ ಕುಲಾಲ್ 600 ರಲ್ಲಿ 588 ಅಂಕ ಗಳಿಸುವ ಮೂಲಕ ವಿಜ್ಞಾನ ವಿಭಾಗದಲ್ಲಿ ಕಾಲೇಜಿಗೆ ದ್ವಿತೀಯ ಸ್ಥಾನಿಯಾಗಿದ್ದಾಳೆ .
ಈ ಹಿಂದೆ ಕೊಣಾಜೆಯ ವಿಶ್ವ ಮಂಗಳ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿರುವ ಈಕೆ, ೨೦೧೩ರ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 625 ಅಂಕಗಳಿಗೆ 621 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದಳು . ಮುಂದೆ ವೈದ್ಯಳಾಗುವ ಕನಸು ಹೊಂದಿರುವ ಮನ್ವಿತಾ ಕೇವಲ ಕಲಿಕೆಯಲ್ಲಿ ಮಾತ್ರ ಮುಂದಿರದೆ ಭರತನಾಟ್ಯ ಪಟುವೂ ಆಗಿದ್ದಾಳೆ . ಇವರು ನೃತ್ಯ ಕ್ಷೇತ್ರದಲ್ಲೂ ಸಾಧನೆ ಮಾಡಲು ಬಯಸಿದ್ದಾರೆ.
ಮಧ್ಯಮ ವರ್ಗದ ಕೌಟುಂಬಿಕ ಹಿನ್ನೆಲೆಯ ಮನ್ವಿತಾ ಕಷ್ಟದಲ್ಲಿ ಓದಿದ್ದೇ ಸಾಧನೆಗೆ ನೆರವಾಗಿದೆ. ಮೆಕಾನಿಕಲ್ ಡಿಪ್ಲೊಮ ಓದಿಕೊಂಡಿರುವ ತಂದೆ ಮೋಹನದಾಸ್ ಕುಲಾಲ್ ವೆಲ್ಡಿಂಗ್ ವರ್ಕ್ಶಾಪ್ ಒಂದನ್ನು ನೋಡಿಕೊಳ್ಳುತ್ತಿದ್ದಾರೆ.


