ಬಂಟ್ವಾಳ : ಕುಲಾಲ ಸಮುದಾಯಕ್ಕೆ ಸೇರಿದ ಎಲ್ಲಾ ಆದಿಮೂಲಗಳ ಸಂಪರ್ಕದ ಹಿತದೃಷ್ಟಿಯಿಂದ ಸಂಘಟನೆ ಅಗತ್ಯವಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್ ಹೇಳಿದರು.
ಮಂಚಿ ಕಯ್ಯೂರಿನ ಶ್ರೀ ನಾಗ ಬ್ರಹ್ಮ, ಶ್ರೀ ಮಲರಾಯ ಮತ್ತು ಕಲ್ಲುರ್ಟಿ ಪಂಜುರ್ಲಿ ಸಪರಿವಾರ ದೈವಗಳ ಕ್ಷೇತ್ರದಲ್ಲಿ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ನಾಗದರ್ಶನ ಹಾಗೂ ದೈವಗಳ ನೇಮೋತ್ಸವದ ಪ್ರಯುಕ್ತ ಗುರುವಾರ ನಡೆದ ತುಳುನಾಡ ನಾಗರಧನೆ, ಭೂತರಾಧನೆ ಆದಿ ಮೂಲದ ಪರಂಪರೆ ವಿಚಾರಗೋಷ್ಟಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘಟನಾ ಸಮಿತಿಯೊಂದನ್ನು ರಚಿಸುವ ಮೂಲಕ ಕುಲಾಲ ಸಮುದಾಯದ ಎಲ್ಲಾ ಆದಿ ಮೂಲಗಳೊಂದಿಗೆ ಸಂಪರ್ಕವನ್ನು ಇಟ್ಟುಕೊಳ್ಳವುದರೊಂದಿಗೆ ಅಜ್ಞಾತವಾಗಿ ಉಳಿದಿರುವ ಆದಿಮೂಲಗಳನ್ನು ಹುಡಕಲು ಸುಲಭವಾಗುತ್ತದೆ. ಮಾತ್ರವಲ್ಲದೆ ಮುಂದಿನ ತಲೆಮಾರಿಗೆ ಸಮುದಾಯದ ಕುಲಗೋತ್ರಗಳ ಮಹತ್ವದ ಬಗ್ಗೆ ತಿಳಿಯಲು, ಸಮುದಾಯದ ಜನರನ್ನು ಸಂಘಟಿಸಲು ಇದು ಅಡಿಪಾಯ ಹಾಕಿಕೊಟ್ಟಂತಾಗುತ್ತದೆ. ಈ ನಿಟ್ಟಿನಲ್ಲಿ ಈ ಅಭಿಯಾನಕ್ಕೆ ಇಲ್ಲಿಂದಲೇ ಚಾಲನೆ ಸಿಗಲಿ ಎಂದು ಆಶಿಸಿದರು.
ಕನ್ನಡ ಉಪನ್ಯಾಸಕಿ ಜ್ಯೋತಿ ಚೇಳಾರು, ಅಮೆತ್ತೋಡು ಬಂಜನ್ ಮೂಲಸ್ಥಾನದ ಮುಖ್ಯಸ್ಥ ಗೋಪಾಲ ಮಾಸ್ತರ್ ಕುಂಡಾವು, ಪಿಲಿಕೂರು ಶ್ರೀ ನಾಗಬ್ರಹ್ಮ ಕ್ಷೇತ್ರ ಸಾಲ್ಯನ್ ಮೂಲ ಸ್ಥಾನದ ಮುಖ್ಯಸ್ಥ ರಮೇಶ್ ಕುಲಾಲ್ ಪಿಲಿಕೂರು, ಕುಳಾಯಿ ಕಲಾಕುಂಭಾ ಸಾಂಸ್ಕøತಿಕ ವೇದಿಕೆಯ ಅದ್ಯಕ್ಷ ನಾಗೇಶ್ ಕುಳಾಯಿ, ಮನೋಜ್ ಕುಳಾಯಿ ವಿಚಾರಗೋಷ್ಟಿಯಲ್ಲಿ ಭಾಗವಹಿಸಿದ್ದರು. ಜೀಣೋದ್ದಾರಸಮಿತಿಯ ಅಧ್ಯಕ್ಷ ಕೆ.ಎಸ್.ಆನಂದ ಕೋಶಾಧಿಕರಿ ಉಮೇಶ್ ಶ್ರೀಯಾನ್ ವೇದಿಕೆಯಲ್ಲಿದ್ದರು.
ಪ್ರಧಾನ ಕಾರ್ಯದರ್ಶಿ ಕೆ.ಪದ್ಮನಾಭ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.
ಚಿತ್ರ-ವರದಿ : ಸಂದೀಪ್ ಸಾಲ್ಯಾನ್, ಬಂಟ್ವಾಳ