ಮಂಗಳೂರು : ಯುವ ಕಥೆಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ವತಿಯಿಂದ ಯುವ ಕಥೆಗಾರ ಪ್ರಶಸ್ತಿ ಪ್ರದಾನ ಸಮಾರಂಭ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಉದಯೋನ್ಮುಖ ಯುವ ಕಥೆಗಾರರ ಕಥಾ ಕಮ್ಮಟವು ಫೆಬ್ರವರಿ 27ರಂದು ಮಂಗಳೂರಿನಲ್ಲಿ ನಡೆಯಲಿದೆ.
ಮಂಗಳೂರು ಆಕಾಶವಾಣಿ, ವಿ. ವಿ ಕಾಲೇಜು ಕನ್ನಡ ಸಂಘ, ಕನ್ನಡ ಕಟ್ಟೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಂಪನಕಟ್ಟೆ ವಿ. ವಿ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಂಗಕರ್ಮಿ ಉದ್ಯಾವರ ಮಾಧವಾಚಾರ್, ಆಕಾಶವಾಣಿ ಸಹಾಯಕ ನಿಲಯ ನಿರ್ದೇಶಕ ಡಾ. ವಸಂತ ಕುಮಾರ್ ಪೆರ್ಲ, ತುಳು ಜಾನಪದ ತಜ್ಞ ಪ್ರೊ. ಎ. ವಿ ನಾವಡ, ಕುಂದಪ್ರಭ ಪತ್ರಿಕೆಯ ಯು. ಎಸ್ ಶೆಣೈ, ವಿ.ವಿ ಕಾಲೇಜು ಪ್ರಾಂಶುಪಾಲ, ಡಾ. ಉದಯ ಕುಮಾರ್ ಇ ಮುಂತಾದವರು ಭಾಗವಹಿಸಲಿದ್ದಾರೆ. ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ವಿನಂತಿಸಿದ್ದಾರೆ.