ಮಂಗಳೂರು : ಇತ್ತೀಚೆಗೆ ನಿಧನರಾದ ಕುಲಾಲ ಸಮುದಾಯದ ಹಿರಿಯ ಸಂಘಟಕ, ಸಹಕಾರಿ ಧುರೀಣ, ಸಾಮಾಜಿಕ ಕಳಕಳಿಯ ನಾಯಕ ಎಂ.ಆರ್.ನಾರಾಯಣ ಅವರಿಗೆ ಕುಲಾಲ ಮಾತೃ ಸಂಘದಲ್ಲಿ ನುಡಿನಮನ ಸಲ್ಲಿಸಲಾಯಿತು.
ಮಾತ್ರ ಸಂಘದ ಆಶ್ರಯದಲ್ಲಿ ಜರುಗಿದ ಈ ಸಂತಾಪ ಸೂಚಕ ಸಭೆಯಲ್ಲಿ ದೇವಿ ದೇವಸ್ಥಾನ, ವೀರನಾರಾಯಣ ದೇವಸ್ಥಾನ, ರಾಜ್ಯ ಕುಂಬಾರ ಸಂಘ, ಕರಾವಳಿ ಕುಲಾಲ ಕುಂಬಾರರ ಯುವವೇದಿಕೆ ಕುಲಾಲ ಸೇವಾದಳ, ಕುಲಾಲ ಮಹಿಳಾ ಮಂಡಲಿ, ನೀರುಮಾರ್ಗ ಕುಲಾಲ ಸಂಘ.ಕೊಲ್ಯ ಕುಲಾಲ ಸಂಘ, ಉರ್ವ ಕುಲಾಲ ಸಂಘದ ನಾಯಕರುಗಳು ಭಾಗವಹಿಸಿ ನಾರಾಯಣ ಅವರು ಸಮುದಾಯದ ಎಳಿಗೆಗಾಗಿ ತಾಲೂಕು ಜಿಲ್ಲೆ ವಿಭಾಗ ಹಾಗು ರಾಜ್ಯ ಮಟ್ಟದಲ್ಲಿ ಮಾಡಿದ ಸೇವೆಯನ್ನ ಸ್ಮರಿಸಲಾಯಿತು.
ಮಾತೃ ಸಂಘದ ಪ್ರಧಾನ ಕಾರ್ಯದರ್ಶಿಯಾದ ಚಂದ್ರಹಾಸ ಕುಲಾಲ್ ರವರು ಮಾತನಾಡಿ “ನಾರಾಯಣ ಅವರು ಹಲವಾರು ಸಂಘ ಸಂಸ್ಥೆಯಲ್ಲಿ ದುಡಿದ ಉತ್ತಮ ಸಮಾಜ ಚಿಂತಕರಾಗಿದ್ದರು . ಅವರ ಅಗಲಿಕೆಯು ತುಂಬಲಾರದ ನಷ್ಟವಾಗಿದೆ. ಶ್ರೀಯುತರು ದೈಹಿಕವಾಗಿ ಅಗಲಿದರೂ ಮಾನಸಿಕವಾಗಿ ನಮ್ಮನಿಮ್ಮೆಲ್ಲರ ಚಿರಾಯುವಾಗಿ ಇದ್ದಾರೆ. ಅವರಿಗೆ ಶ್ರೀದೇವಿ ಹಾಗೂ ಶ್ರೀ ವೀರನಾರಾಯಣ ದೇವರು ಮೋಕ್ಷವನ್ನು ಕರುಣಸಲಿ” ಎಂದು ಹರಿಸಿದರು.
ಮಾತೃ ಸಂಘದ ಸಂಚಾಲಕರು ಆಗಿರುವ ಶ್ರೀ ಗೋಪಾಲ್ ಎಸ್ “ಅಗಲಿದ ನಾರಾಯಣ ಅವರು ನೇರ ನುಡಿ ನಡೆ ವ್ಯಕ್ತಿತ್ವ ಹೊಂದಿದ್ದರು. ದೇವತಾ ಕಾರ್ಯಮಾಡಿ ಶ್ರೀಯುತರ ಗುಣ ನಡತೆಯನ್ನು ಸದ್ಬಳಕೆ ಮಾಡಿದರೆ ಮಾತ್ರ ಅವರ ಆತ್ಮಕ್ಕೆ ಶಾಂತಿ ದೊರಕುತ್ತದೆ” ಎಂದು ತಿಳಿಸಿದರು.
ಡಾ|| ಅಣ್ಣಯ್ಯ ಕುಲಾಲ್ ಉಳ್ತೂರು ಮಾತನಾಡಿ, “ಉತ್ತಮ ನಾಯಕತ್ವ, ಉತ್ತಮ ಸಮಾಜ ಚಿಂತಕ, ಪುತ್ತೂರು, ಬಂಟ್ವಾಳ ಮತ್ತು ಸುರತ್ಕಲ್ ನಲ್ಲಿ ಸಹಕಾರಿ ಬ್ಯಾಂಕ್ನ್ನು ಸ್ಥಾಪನೆ ಮಾಡಿದ ಸಮಾಜದ ದೊಡ್ಡ ಸಾಧಕ. ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದವರಲ್ಲಿ ಮೊದಲಿಗರು. ಅವರ ಸಾವು ಮರೆಯಲಾಗದ ನೋವು ತಂದಿದೆ” ಎಂದು ಸಂತಾಪ ವ್ಯಕ್ತ ಪಡಿಸಿದರು.
ನೀರುಮಾರ್ಗ ಸಂಘದ ಅಧ್ಯಕ್ಷರಾದ ಮಹಾಬಲ ಕುಲಾಲ್ ನಾರಾಯಣ ಅವರನ್ನು ಸ್ಮರಿಸುತ್ತಾ , ಕಂಡದ್ದನ್ನು ಕಂಡ ಹಾಗೇ ತಿಳಿಸುತಿದ್ದ ಸದ್ಗುಣವಂತರಾದ ಶೀಯುತರು ಸಮಾನ ವಯಸ್ಕರಂತೆ ಎಲ್ಲರಲ್ಲೂ ಬೆರೆಯುತ್ತಿದ್ದರು. ಜೊತೆ ಜೊತೆಯಾಗಿ ಎಲ್ಲರನ್ನೂ ಮೇಲೆತ್ತೆರಕ್ಕೆ ಕರೆದು ಕೊಂಡು ಹೋದ ದೀಮಂತ ವ್ಯಕ್ತಿ ಇವರ ಅಗಲಿಕೆಯನ್ನು ನಮಗೆ ತುಂಬಿಸಲು ಅಸಾದ್ಯವೆಂದು ನುಡಿದರು. ಶ್ರೀ ಸುಂದರ್ ಕುಲಾಲ್ ಶಕ್ತಿನಗರ ರವರು ಸಜ್ಜನಿಕೆಯ ದೀಮಂತ ದಿಟ್ಟ ವ್ಯಕ್ತಿತ್ವವನ್ನು ಹೊಂದಿದ್ದ ಶ್ರೀಯುತರಿಗೆ ಶಾಂತಿ ದೊರಕಲಿ ಎಂದು ದೇವರಲ್ಲಿ ಬೇಡಿಕೊಂಡರು. ಕೊಲ್ಯ ಕುಲಾಲ ಸಂಘದ ಅಧ್ಯಕ್ಷರಾದ ಶ್ರೀ ದೇವಪ್ಪ ಮೂಲ್ಯ ರವರು ನಮ್ಮ ಸಹಕಾರಿ ಬ್ಯಾಂಕಿಗೆ ಬೇಕಾದಷ್ಟು ಸಹಕಾರ ನೀಡಿದ ದೀಮಂತ ವ್ಯಕ್ತಿ ಹಾಗೂ ನಿಶ್ವಾರ್ಥ ಸೇವೆಯನ್ನು ನೀಡಿದ ಶ್ರೀಯುತರ ಅಗಲಿಕೆಯು ತುಂಬಲಾರದ ನಷ್ಟವೆಂದು ತಿಳಿಸಿದರು.
ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ಧಾರದ ಅಧ್ಯಕ್ಷರಾದ ದಾಮೋದರ, ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲ ಮಾತೃಸಂಘದ ಅಧ್ಯಕ್ಷರಾದ ಶ್ರೀ ರಾಜೇಂದ್ರ ಕುಮಾರ್ ಅಳಪೆ ಮುಂತಾದ ಗಣ್ಯರು ಸಂತಾಪ ಸೂಚಿಸಿದರು.