ಬೆಂಗಳೂರು : ವಿಧಾನಪರಿಷತ್ ಗೆ ಸದಸ್ಯರ ನಾಮನಿರ್ದೇಶನ ಮಾಡುವ ವೇಳೆ ಹಿಂದುಳಿದ ಕುಂಬಾರ ಸಮಾಜದವರನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಕಲಾಸಿಪಾಳ್ಯಂ ಕುಂಬಾರ ಸೇವಾ ಸಂಘದ ಅಧ್ಯಕ್ಷ ಮುನಿಸ್ವಾಮಿ ಕುಂಬಾರ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ 18 ಲಕ್ಷ ಜನಸಂಖ್ಯೆ ಇರುವ ಹಾಗೂ ರಾಜ್ಯದಲ್ಲಿ 3ನೇ ಅತಿದೊಡ್ಡ ಜನಸಂಖ್ಯೆ ಹೊಂದಿರುವ ಕುಂಬಾರ ಜನಾಂಗವನ್ನು ಕಡೆಗಣಿಸಲಾಗಿದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಕುಂಬಾರ ಸಮಾಜವನ್ನು ಪ್ರವರ್ಗ 2ರಲ್ಲಿ ಸೇರಿಸಿ ಮೀಸಲಾತಿಯಿಂದ ವಂಚಿಸಲಾಗಿದೆ ಎಂದು ಅವರು ಸುದ್ದಿಗೋಷ್ಠಿ ನಡೆಸಿ ದೂರಿದರು.
ಕುಂಬಾರ ಸಮಾಜದ ಬೆರಳೆಣಿಕೆಯಷ್ಟು ಜನರು ಮಾತ್ರ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಉಳಿದಂತೆ ಸಣ್ಣಪುಟ್ಟ ಕಸುಬುಗಳಲ್ಲೇ ಜೀವವ ನಿರ್ವಹಿಸಲಾಗುತ್ತಿದೆ. ಹೀಗಾಗಿ ಸರಕಾರ ಕುಂಬಾರ ಜನಾಂಗಕ್ಕೆ ಮೀಸಲು ನೀಡಲು ಮುಂದಾಗಬೇಕು ಎಂದು ಮುನಿಸ್ವಾಮಿ ಒತ್ತಾಯಿಸಿದ್ದಾರೆ.