ಮಂಗಳೂರು : ಕರಾವಳಿ ಕುಲಾಲ ಕುಂಬಾರರ ಯುವವೇದಿಕೆಯ ಕೇಂದ್ರ ಸಮಿತಿಯ ಆಶ್ರಯದಲ್ಲಿ ಪ್ರತಿಷ್ಠಿತ ಸರ್ವಜ್ಞ ಟ್ರೋಫಿ 2016 ಕ್ರಿಕೆಟ್ ಪಂದ್ಯಾಟವನ್ನು ಫೆಬ್ರವರಿ 21ಕ್ಕೆ ಮಂಗಳೂರಿನಲ್ಲಿ ಜರಗಿಸುವುದು ಎಂದು ನಿನ್ನೆ ನಡೆದ ಕೇಂದ್ರೀಯ ಸಮಿತಿಯ ಸಭೆಯಲ್ಲಿ ನಿರ್ಣಯಿಸಲಾಯಿತು ಎಂದು ವೇದಿಕೆಯ ಸ್ಥಾಪಕಾಧ್ಯಕ್ಷರಾದ ಡಾ.ಎಂ.ಅಣ್ಣಯ್ಯ ಕುಲಾಲ್ ಉಳ್ತೂರು ತಿಳಿಸಿದ್ದಾರೆ.
ಈ ಬಾರಿಯೂ ಕಾಸರಗೋಡು ಸೇರಿದಂತೆ ಉಡುಪಿ ಹಾಗೂ ದ.ಕ ಜಿಲ್ಲೆಯ ವಿಧಾನ ಸಭಾ ಮಟ್ಟದ 15 ತಂಡಗಳು ಸೆಣಸಲಿದ್ದು , ಆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸುಜೀರ್ ಕುಡುಪು, ದೇವಿಪ್ರಸಾದ್, ಗಂಗಾಧರ್ ಬಂಜನ್, ಅಶೋಕ್ ಕುಲಾಲ್, ಜಯೇಶ್ ಗೋವಿಂದ ಅರವರನ್ನು ಸಂಪರ್ಕಿಸಲು ಕೋರಲಾಗಿದೆ.
ಪ್ರತೀ ವಿಧಾನಸಭಾ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಸಭೆ ಕರೆದು ನೂತನ ಪಧಾದಿಕಾರಿಗಳ ಆಯ್ಕೆ ಮಾಡಿ ಅಲ್ಲಿಂದ 5 ಜನರ ತಂಡವನ್ನು (ಅಧ್ಯಕ್ಷರು:1 ಉಪಾದ್ಯಕ್ಷರು:2 ಕಾರ್ಯದರ್ಶಿ:1 ಸಂಘಟನಾ ಕಾರ್ಯದರ್ಶಿ:1) ಪ್ರತೀ ವಿದಾನ ಸಭಾ ಮಟ್ಟ ಹಾಗು ಜಿಲ್ಲೆಯಿಂದ ಕೇಂದ್ರ ಸಮಿತಿಗೆ ಕಳುಹಿಸುವ ಜವಾಬ್ದಾರಿಯನ್ನು ಈಗಿನ ಜಿಲ್ಲಾ ಹಾಗು ವಿಧಾನ ಸಭಾ ಅಧ್ಯಕ್ಷರುಗಳಿಗೆ ನೀಡಲಾಗಿದ್ದು ಹಾಗೂ ಮಾಹಿತಿಯನ್ನು ಮಾಧ್ಯಮ ವಕ್ತಾರರಾದ ಸತೀಶ್ ಕುಲಾಲ್ ನಡೂರವರಿಗೂ ತಿಳಿಸುವಂತೆ ಕೋರಲಾಗಿದೆ.
ಉಡುಪಿಯಲ್ಲಿ ಸತೀಶ್ ಕುಲಾಲ ಕಡಿಯಾಳಿ , ರಾಜೀವ ಕುಲಾಲ್ ಬ್ರಹ್ಮಾವರ, ಶಂಕರ ಕುಲಾಲ್ , ಬಸವರಾಜ್ ಕುಲಾಲ ಬ್ರಹ್ಮಾವರ ಹಾಗು ದ.ಕ ಜಿಲ್ಲೆಯಲ್ಲಿ ತೇಜಸ್ವೀರಾಜ್ ಗಂಗಾಧರ್ ಬಂಜನ್, ಸುಜೀರ್ ಕುಡುಪು, ಜಯೇಶ್, ಹರೀಶ್ ಕಾರಿಂಜ., ಅನಿಲ್ ದಾಸ್ ಇವರಿಗೆ ಜವಾಬ್ದಾರಿಯನ್ನು ನೀಡಲಾಗಿದ್ದು, ಇವರುಗಳ ಶಿಫಾರಸ್ಸಿನಂತೆ ಪಂದ್ಯಾಟದ ದಿನದಂದೇ ವಿಭಾಗೀಯ ಅಧ್ಯಕ್ಷರು ಹಾಗು ಜಿಲ್ಲಾ ಅಧ್ಯಕ್ಷರನ್ನ ಆಯ್ಕೆ ಮಾಡಲಾಗುವುದೆಂದು ಮಾತ್ರಸಂಘದಲ್ಲಿ ಜರುಗಿದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸರ್ವಜ್ಞ ಟ್ರೋಫಿ-2015 ವಿಜೇತ ತಂಡ