ಪುತ್ತೂರು : ನೂಜಿಬಾಳ್ತಿಲ ಗ್ರಾಮದ ಕುರಿಯಾಳಕೊಪ್ಪ ಕುಂಬಾರರ ಸಂಘದ ವತಿಯಿಂದ ಕುರಿಯಾಳಕೊಪ್ಪ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನಕ್ಕೆ ಧ್ವನಿವರ್ಧಕ ಸೆಟ್ಟನ್ನು ಕೊಡುಗೆಯಾಗಿ ಇತ್ತೀಚೆಗೆ ನೀಡಲಾಯಿತು.
ಸಂಘದ ಅಧ್ಯಕ್ಷ ರುಕ್ಮಯ ಬೇರಿಕೆ, ಕಾರ್ಯದರ್ಶಿ ಜಿನ್ನಪ್ಪ ಕೆ, ಕೋಶಾಧಿಕಾರಿ ಚಂದ್ರಶೇಖರ ಕೊಪ್ಪ, ಉಪಾಧ್ಯಕ್ಷ ಕುಶಾಲಪ್ಪ ಹಾಗೂ ಸಂಘದ ಸದಸ್ಯರು ಧ್ವನಿವರ್ಧಕದ ಸೆಟ್ಟನ್ನು ರೆಂಜಿಲಾಡಿ ಬೀಡಿನ ಯಶೋಧರ ಬಳ್ಳಾಲ್, ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಮಹಾವೀರ ಜೈನ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಬ್ರಂತೋಡು, ಆಡಳಿತ ಮಂಡಳಿ ಕಾರ್ಯದರ್ಶಿ ಹರೀಶ್ಚಂದ್ರ ಕನ್ವಾರೆ ಇವರ ಮುಖಾಂತರ ದೇವಸ್ಥಾನಕ್ಕೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಕೋಶಾಧಿಕಾರಿ ವಿಶ್ವನಾಥ ರೈ ಐಲ, ಅಡೆಂಜ ದೇವಸ್ಥಾನದ ಕಾರ್ಯದರ್ಶಿ ರಾಧಾಕೃಷ್ಣ, ಇಚ್ಲಂಪಾಡಿ ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ನೂಜಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿ ಸಾಯಿರಾಂ, ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಬ್ರಹ್ಮಕಲಶೋತ್ಸವ ಆರ್ಥಿಕ ಸಮಿತಿ ಸಂಚಾಲಕ ಅಕ್ಷಯ ಕುಮಾರ್ ಕೂರಟ, ಉದಯ ಕುಮಾರ್ ಬಸ್ತಿ ಜೀರ್ಣೋದ್ದಾರ ಸಮಿತಿ ಉಪಾಧ್ಯಕ್ಷರಾದ ಪ್ರಭಾಕರ ಗೌಡ ಪದಕ, ಮೋನಪ್ಪ ಕೊಪ್ಪ, ಧರಣೇಂದ್ರ ಇಂದ್ರ, ವಿಕ್ರಮ್ ಪ್ರಸಾದ್ ರೈ, ಸದಸ್ಯರಾದ ಚೆನ್ನಪ್ಪ ಗೌಡ ಕನ್ವಾರೆ, ಲೋಕಯ್ಯ ಗೌಡ ಕೋಡಿಗದ್ದೆ, ಸಂಜೀವ ದರ್ಖಾಸು, ಪೂವಪ್ಪ ಬೇರಿಕೆ, ಚಂದ್ರಶೇಖರ ಕೊಪ್ಪ, ಕೊರಗಪ್ಪ ಕೊಪ್ಪ, ರುಕ್ಮಯ ಕೊಪ್ಪ, ರಾಮಣ್ಣ ಕೊಪ್ಪ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ಅಚ್ಚುತ ಗೌಡ ಪಾಡ್ಲ, ಕಾರ್ಯದರ್ಶಿ ಗಂಗಾಧರ ಕೆ.ಎಂ, ಧ್ವನಿವರ್ಧಕ ಮತ್ತು ಬೆಳಕು ವ್ಯವಸ್ಥೆಯ ಸಂಚಾಲಕ ವಾಸುದೇವ ಕೇಪುಂಜ, ಪೂವಪ್ಪ ಆಚಾರಿ, ಡೀಕಯ್ಯ ಗೌಡ ಪಾಲೆತ್ತಡಿ, ಮಾಲಪ್ಪ, ಜಿನ್ನಪ್ಪ ಕೆ.ಎಂ, ಧರ್ನಪ್ಪ, ಶ್ರೀನಿವಾಸ, ಶೀನಪ್ಪ ಟೈಲರ್, ಮೋನಪ್ಪ ಕುಂಬಾರ, ಪೊಡಿಯ ಕುಂಬಾರ, ದಯಾನಂದ, ನಾರಾಯಣ ಬೇರಿಕೆ, ಶೀನಪ್ಪ ಬೇರಿಕೆ, ದಯಾನಂದ ಬೇರಿಕೆ, ಪುಟ್ಟಣ್ಣ ಬೇರಿಕೆ, ಆನಂದ ಕೊಪ್ಪ, ಸುಂದರ ಕೊಪ್ಪ, ಜಿನ್ನಪ್ಪ ಕೊಪ್ಪ, ಕೊರಗಪ್ಪ ಕೊಪ್ಪ, ಸಂಜೀವ ಪಳಿಕೆ, ಕೊರಗಪ್ಪ ಎ, ವಾಸಪ್ಪ ಕೊಪ್ಪ, ಬಾಬು ಪಿ.ಕೆ, ರಾಮಣ್ಣ, ಮೇದಪ್ಪ, ಶೇಖರ ಪೂಜಾರಿ ಮೇಸ್ತ್ರಿ ಉಪಸ್ಥಿತರಿದ್ದರು.
ಕುರಿಯಾಳಕೊಪ್ಪ ಕುಂಬಾರರ ಸಂಘ ರಚನೆ – ಅಧ್ಯಕ್ಷರಾಗಿ ರುಕ್ಮಯ್ಯ ಬೇರಿಕೆ, ಪ್ರಧಾನ ಕಾರ್ಯದರ್ಶಿಯಾಗಿ ಜಿನ್ನಪ್ಪ
ಕುರಿಯಾಳಕೊಪ್ಪ ಕುಂಬಾರರ ಸಂಘದ ನೂತನ ಆಡಳಿತ ಮಂಡಳಿಯನ್ನು ಬೇರಿಕೆಯಲ್ಲಿ ಪೂವಪ್ಪರವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು. ಅಧ್ಯಕ್ಷರಾಗಿ ರುಕ್ಮಯ್ಯ ಬೇರಿಕೆ, ಉಪಾಧ್ಯಕ್ಷರಾಗಿ ಕುಶಾಲಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಜಿನ್ನಪ್ಪ, ಕೋಶಾಧಿಕಾರಿ ಚಂದ್ರಶೇಖರ ಕೊಪ್ಪ ಸೇರಿದಂತೆ 33 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.