ಮಂಗಳೂರು : ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಜಯಗಳಿಸಿದೆ. ಈ ಜಿಲ್ಲೆಯ ತಂಡವನ್ನು ಪ್ರತಿನಿಧಿಸಿ ಆಡಿದ ಮಂಗಳೂರಿನ ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಹಾಗೂ ಎಸ್ ಎಫ್ ಐ ಬಜಾಲ್ ಘಟಕದ ಕಾರ್ಯದರ್ಶಿ ಮಧುವಂತ್ ಪಕ್ಕಲಡ್ಕ ತಂಡವನ್ನು ಜಯಗೊಳಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದಲ್ಲದೆ, ಉತ್ತಮ ಹೊಡೆತಗಾರ ಪ್ರಶಸ್ತಿಯನ್ನು ಪಡೆದಿರುತ್ತಾರೆ .
ಮಧುವಂತ್ ಪಕ್ಕಲಡ್ಕ ದಕ್ಷಿಣ ಕನ್ನಡ ತಂಡವನ್ನು ಜಯಗಳಿಸಲು ಮುನ್ನಡೆಸಿದ ರೀತಿ ಹಾಗೂ ಅವರು ಆಡಿದ ಶೈಲಿಯಿಂದ ತಂಡವು ಬಾಕಿ ಎಲ್ಲಾ ತಂಡವನ್ನು ಹಿಂದಿಕ್ಕಿ ಫೈನಲ್ ವರೆಗೆ ತಲುಪಿಸುವಲ್ಲಿ ಯಶಸ್ವಿಯಾಗಿತ್ತಲ್ಲದೆ , ಫೈನಲ್ ನಲ್ಲಿ ತುಮಕೂರು ತಂಡವನ್ನು ಸೋಲಿಸುವ ಮೂಲಕ ವಿಜೇತ ತಂಡವಾಗಿ ಹೊರಹೊಮ್ಮಿಸುವಲ್ಲಿ ತುಂಬಾ ಶ್ರಮ ಪಟ್ಟಿದ್ದಾರೆ. ಪರಿಣಾಮವಾಗಿ ಮುಂದೆ ನಡೆಯಲಿರುವ ರಾಷ್ಟ್ರೀಯ ಮಟ್ಟದ ವಾಲಿಬಾಲ್ ತಂಡಕ್ಕೆ ಮಧುವಂತ್ ಪಕ್ಕಲಡ್ಕ ಆಯ್ಕೆಯಾಗಿದ್ದಾರೆ.



