ಪುತ್ತೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : ಜೇಸಿಐ ಬೆಳ್ಳಾರೆ ಪಾಲ್ಗುಣಿ ಪ್ರಾಂತ್ಯ ಡಿ ವಲಯ 15ರ ವತಿಯಿಂದ ನಾಟ್ಯರಂಗ ಕಲಾ ಕೇಂದ್ರ ಪೆರ್ಲಂಪಾಡಿ ಇದರ ನಿರ್ದೇಶಕ ನಾಗರಾಜ್ ಕುಲಾಲ್ ಪೆರ್ಲಂಪಾಡಿ ಅವರಿಗೆ ಸಾಂಸ್ಕೃತಿಕ ಕಲಾ ಪ್ರತಿಭೆಯನ್ನು ಪರಿಗಣಿಸಿ ‘ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್’ ಅವಾರ್ಡ್ ಅನ್ನು ಏ.25ರಂದು ನಾಟ್ಯರಂಗ ಕಲಾ ಕೇಂದ್ರದ ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ ನೀಡಲಾಯಿತು.ಪೆರ್ಲಂಪಾಡಿ ಅಧ್ಯಕ್ಷೆ ಜೆಸಿ ಪೂರ್ಣಿಮಾ ಹಾಗೂ ಕಾರ್ಯದರ್ಶಿ Jc ವೇದಿತ್ ರೈ ಎಂ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಮಕ್ಕಳ ಪೋಷಕರು ಹಾಗೂ ಅತಿಥಿಗಳು ಉಪಸ್ಥಿತರಿದ್ದರು.
ನಾಗರಾಜ್ ಕುಲಾಲ್ ಪೆರ್ಲಂಪಾಡಿ ಅವರು ಸ್ನಾತಕೋತರ ಪದವಿಯನ್ನು ಮನೋವಿಜ್ಞಾನದಲ್ಲಿ ಪೂರ್ಣಗೊಳಿಸಿ ಯೆನೆಪೋಯ ಮೆಡಿಕಲ್ ಕಾಲೇಜ್ ಹಾಗೂ ಕಣಚೂರು ಮೆಡಿಕಲ್ ಕಾಲೇಜ್ ದೇರಳಕಟ್ಟೆ, ಮಕ್ಕಳ ಕಲ್ಯಾಣ ಇಲಾಖೆಯ ಬಾಲಕರ ಬಾಲ ಮಂದಿರದಲ್ಲಿ ಆಪ್ತ ಸಮಾಲೋಚಕರಾಗಿಯೂ ಕಾರ್ಯನಿರ್ವಹಿಸಿರುತ್ತಾರೆ ಹಾಗೂ ಸಾಂಸ್ಕೃತಿಕ ರಂಗದಲ್ಲಿ ವಿವಿಧ ಪ್ರಕಾರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಭರತನಾಟ್ಯ, ಜಾನಪದ ನೃತ್ಯ ,ಯಕ್ಷಗಾನ, ಸಂಗೀತ, ನಾಟಕ , ವರ್ಣಲಂಕಾರ,ಸಾಹಿತ್ಯ ಕ್ಷೇತ್ರ ಹಾಗೂ ದೈವರಾದನೆಯ ಅರ್ಚಕರಾಗಿ ಸೇವೆ ಸಲ್ಲಿಸಿ ಕೊಂಡು ನಾಟ್ಯರಂಗಾ ಕಲಾಕೇಂದ್ರ ಸಂಸ್ಥೆಯನ್ನು ಸ್ಥಾಪಿಸಿ ಕಳೆದ ಹತ್ತು ವರ್ಷಗಳಿಂದ ನೂರಾರು ವಿದ್ಯಾರ್ಥಿಗಳಿಗೆ ಕಲಾ ತರಬೇತಿಯನ್ನು ನೀಡಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಭಾಗವಹಿಸುವ ಮೂಲಕ ತನ್ನನ್ನು ತಾನು ತೊಡಗಿಸಿಕೊಂಡು ಕಲಾ ಸೇವೆಯನ್ನು ನೀಡುತ್ತಾ ಬರುತ್ತಿದ್ದಾರೆ.ಇವರು ದಿ. ಮೋನಪ್ಪ ಮೂಲ್ಯ ಹಾಗೂ ಜಯಂತಿ ಅವರ ಪುತ್ರ. ಪತ್ನಿ ಗೀತಶ್ರೀ ಹಾಗೂ ಮಗಳು ಶ್ರೀಜಾ ಕುಲಾಲ್ ರವರೊಂದಿಗೆ ಪೆರ್ಲಂಪಾಡಿಯಲ್ಲಿ ನೆಲೆಸಿದ್ದಾರೆ.

