ಬಂಟ್ವಾಳ(ಕುಲಾಲ ವರ್ಲ್ಡ್ ಡಾಟ್ ಕಾಮ್): ತಾಲೂಕಿನ ಸಜೀಪ ಮುನ್ನೂರು ಗ್ರಾಮದ ವರಕಾಯಿ ಎಂಬಲ್ಲಿ ಸೀತಾ ಎಂಬ ತಾಯಿಯೊಬ್ಬರ ಬದುಕು ಇಂದು ಅಕ್ಷರಶಃ ಬೀದಿಗೆ ಬಂದು ನಿಂತಿದೆ. ವಿಧಿಯಾಟಕ್ಕೆ ಮರುಗದವರಿಲ್ಲ ಎಂಬಂತೆ, ಈ ಕುಟುಂಬದ ಮೇಲೆ ಒಂದರ ಮೇಲೊಂದರಂತೆ ಸಂಕಷ್ಟಗಳು ಅಪ್ಪಳಿಸುತ್ತಿವೆ.
ನೋವಿನ ಮೇಲೆ ಸವಾರಿ ಮಾಡುತ್ತಿರುವ ಬದುಕು
ಸೀತಾ ಅವರ ಸಂಸಾರದಲ್ಲಿ ಇಬ್ಬರು ಹೆಣ್ಣುಮಕ್ಕಳು. ಅದರಲ್ಲಿ ಒಬ್ಬಳು ಅಂಗವಿಕಲರಾಗಿದ್ದು ಹಾಗೂ ಒಬ್ಬ ಗಂಡುಮಗ ಕೂಡಾ ವಿಶೇಷ ಚೇತನ ವ್ಯಕ್ತಿಯಾಗಿದ್ದು ಪರಾವಲಂಬಿಯಾಗಿದ್ದಾರೆ. ಕುಟುಂಬದ ಆಧಾರಸ್ತಂಭವಾಗಿದ್ದ ಮಗ ಇಂದು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗೂ ಹಣವಿಲ್ಲದ ಸ್ಥಿತಿಯಲ್ಲಿದ್ದಾರೆ. ಕಳೆದ ವರ್ಷದ ಬಿರುಗಾಳಿ ಸಹಿತ ಮಳೆಗೆ ಇದ್ದ ಪುಟ್ಟ ಮನೆಯೂ ನೆಲಸಮವಾಗಿದೆ. ಪ್ರಸ್ತುತ ಇವರು ಒಂದು ಪುಟ್ಟ ಬಾಡಿಗೆ ಮನೆಯಲ್ಲಿ ದಿನ ದೂಡುತ್ತಿದ್ದಾರೆ.
ಹಠ ಬಿಡದ ಹೆಣ್ಣುಮಗಳು – ಬೆನ್ನೆಲುಬಾಗಿ ನಿಲ್ಲೋಣ ಬನ್ನಿ
ಎಲ್ಲವೂ ಕಳೆದುಹೋದರೂ ಧೃತಿಗೆಡದ ಸೀತಾ ಅವರ ಮಗಳು, ಕೂಲಿ ಕೆಲಸಕ್ಕೆ ಹೋಗಿ ತನ್ನ ಕುಟುಂಬವನ್ನು ಸಲಹುತ್ತಿದ್ದಾರೆ. ತನ್ನ ಅಕ್ಕ ಮತ್ತು ತಾಯಿಗೆ ಒಂದು ಸ್ವಂತ ಮನೆ ಕಟ್ಟಿಸಿಕೊಡಬೇಕೆಂಬ ಹಂಬಲದಿಂದ, ತಾನು ದುಡಿದ ಅಲ್ಪಸ್ವಲ್ಪ ಹಣದಲ್ಲೇ ಮನೆ ನಿರ್ಮಾಣದ ಕೆಲಸ ಆರಂಭಿಸಿದ್ದಾರೆ. ಆದರೆ ಇಂದು ಆರ್ಥಿಕ ಮುಗ್ಗಟ್ಟಿನಿಂದಾಗಿ ಗೋಡೆಗಳು ಅರ್ಧಕ್ಕೆ ನಿಂತುಬಿಟ್ಟಿವೆ.
ಸಮಯ ಮಿಂಚುವ ಮುನ್ನ ನಾವೂ ಕೈ ಜೋಡಿಸೋಣ!
ಮಳೆಗಾಲ ಹತ್ತಿರ ಬರುತ್ತಿದೆ. ಆ ಪ್ರದೇಶದ ರಸ್ತೆಗಳು ತೀರಾ ಹದಗೆಟ್ಟಿರುವುದರಿಂದ, ಒಮ್ಮೆ ಮಳೆ ಶುರುವಾದರೆ ಅಲ್ಲಿಗೆ ಸಾಮಗ್ರಿಗಳನ್ನು ಸಾಗಿಸಲು ಲಾರಿಗಳಿಗೂ ಸಾಧ್ಯವಾಗುವುದಿಲ್ಲ. ಈಗ ನಾವು ಸಹಾಯ ಮಾಡದಿದ್ದರೆ, ಈ ಬಡ ಕುಟುಂಬದ ಕನಸಿನ ಮನೆ ಅರ್ಧಕ್ಕೆ ನಿಂತು ಮಳೆಗೆ ಆಹುತಿಯಾಗಬಹುದು.
ಸಹಾಯದ ಹಸ್ತ ಚಾಚಿ:
ಒಂದು ಇಟ್ಟಿಗೆ ಅಥವಾ ಒಂದು ಚೀಲ ಸಿಮೆಂಟ್ ನೀಡುವಷ್ಟು ಶಕ್ತಿ ನಿಮ್ಮಲ್ಲಿದ್ದರೆ, ದಯವಿಟ್ಟು ಈ ಕುಟುಂಬದ ಕಣ್ಣೀರು ಒರೆಸಲು ಮುಂದೆ ಬನ್ನಿ. ನಿಮ್ಮ ಪುಟ್ಟ ಸಹಾಯವು ಅವರ ಪಾಲಿನ ದೊಡ್ಡ ಆಸರೆಯಾಗಲಿದೆ. ಒಂದು ಶೇರ್ ಮಾಡುವ ಮೂಲಕವೂ ನಾವು ನೀವು ಎಲ್ಲರೂ ಈ ಕುಟುಂಬಕ್ಕೆ ನೆರವಾಗಬಹುದು.
📞 ಸಂಪರ್ಕಿಸಿ: 8971667378
💳 UPI ಮೂಲಕ ಸಹಾಯ ಮಾಡಿ: bhavyakulalk366@okaxis





