ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2025-26ನೇ ಸಾಲಿನ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) 10ನೇ ತರಗತಿಯ ಪರೀಕ್ಷೆಯಲ್ಲಿ ಥಾಣೆ ನ್ಯೂ ಹರಿಜೋನ್ ಸ್ಕಾಲರ್ ಸ್ಕೂಲ್ ಇಲ್ಲಿನ ವಿದ್ಯಾರ್ಥಿನಿ ಶಮಾ ಸಂಜೀವ ಬಂಗೇರ ಅವರು 97.4% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮುಂಬಯಿ ಕುಲಾಲ ಸಂಘದ ಯುವ ವಿಭಾಗದ ಮಾಜಿ ಚೇರ್ ಮೆನ್ ಹಾಗೂ CMM ಸ್ಥಳೀಯ ಸಮಿತಿಯ ಮಾಜಿ ಕಾರ್ಯಾಧ್ಯಕ್ಷರಾದ ಸಂಜೀವ ಬಂಗೇರ ಮತ್ತು ಮಲ್ಲಿಕಾ ಸಂಜೀವ ಬಂಗೇರ ದಂಪತಿಯ ಸುಪುತ್ರಿ.

