ಕುಲಾಲ ಬಂಗೇರ ಕುಟುಂಬಸ್ಥರ ಆದಿಮೂಲ ಸ್ಥಾನ
ಕಾಸರಗೋಡು(ಕುಲಾಲ ವರ್ಲ್ಡ್ ಡಾಟ್ ಕಾಮ್): ಮಂಗಲ್ಪಾಡಿ ಕುಡಾಲುಮೇರ್ಕಲದಲ್ಲಿರುವ ಕುಲಾಲ ಬಂಗೇರ ಕುಟುಂಬಸ್ಥರ ಆದಿಮೂಲ ಸ್ಥಾನವಾದ ಕುಡಾಲು ಹೊಸಮನೆ ಶ್ರೀ ಮಲರಾಯ, ಪಿಲಿಚಾಮುಂಡಿ, ಕೊರತಿ ದೈವಗಳ ಮತ್ತು ನಾಗಕ್ಷೇತ್ರದಲ್ಲಿ ಏಪ್ರಿಲ್ 14, 2026ರ ಮಂಗಳವಾರದಂದು ವಾರ್ಷಿಕೋತ್ಸವ- ಕ್ಷೀರಾಭಿಷೇಕ ಮತ್ತು ತಂಬಿಲ ಸೇವೆ ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗಿತು.
ಕ್ಷೇತ್ರದ ನಾಗದೇವರಿಗೆ ಹಾಗೂ ವಿವಿಧ ದೈವಗಳಿಗೆ ಈ ಸಂದರ್ಭದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿತ. ಭಕ್ತಾಭಿಮಾನಿಗಳು ಕುಟುಂಬ ಸಮೇತರಾಗಿ ಆಗಮಿಸಿ ಪ್ರಸಾದ ಸ್ವೀಕರಿಸಿ, ದೈವ-ದೇವರ ಕೃಪೆಗೆ ಪಾತ್ರರಾದರು.
ಅಭಿವೃದ್ಧಿ ಕಾರ್ಯಗಳು:
ಕ್ಷೇತ್ರದ ಶಾಶ್ವತ ಚಪ್ಪರದ ಕೆಲಸವು ಈಗಾಗಲೇ ಭಕ್ತರ ಸಹಕಾರದಿಂದ ಪೂರ್ಣಗೊಂಡಿದೆ. ಪ್ರಸ್ತುತ ನಾಗದೇವರ ಕಟ್ಟೆಯ ಸುತ್ತ ಕಲ್ಲು ಹಾಸುವ ಕೆಲಸ ಬಾಕಿ ಇದ್ದು, ಇದಕ್ಕೆ ದೇಣಿಗೆ ನೀಡಲು ಇಚ್ಛಿಸುವ ಭಕ್ತರು ಸಮಿತಿಯನ್ನು ಸಂಪರ್ಕಿಸಿ ರಶೀದಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಕುಟುಂಬದ ಪೂಜಾರಿ ಬಾಬು ಬಂಗೇರ ಹೊಸಮನೆ (ಮೊ: 9895173154) ಅಥವಾ ಸೇವಾ ಸಮಿತಿಯ ಪದಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.




