ಕುಂದಾಪುರ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಬಡತನವೆಂಬುದು ಸಾಧನೆಗೆ ಅಡ್ಡಿಯಲ್ಲ ಅದೊಂದು ಛಲದ ಕಿಚ್ಚು ಎಂದು ಸಾಧಿಸಿ ತೋರಿಸಿದ್ದಾಳೆ ಈ ಹೆಣ್ಣುಮಗಳು. ಶಂಕರನಾರಾಯಣದ ಮದರ್ ತೆರೇಸಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಿಂಚನಾ. ತಾಯಿಯ ಕಷ್ಟವನ್ನು ಕಣ್ಣಾರೆ ಕಂಡಿದ್ದ ಆಕೆ, ದ್ವಿತೀಯ ಪಿಯುಸಿಯಲ್ಲಿ ಅಸಾಮಾನ್ಯ ಸಾಧನೆ ಮಾಡುವ ಮೂಲಕ ಮನೆ, ಶಾಲೆಗೆ ಕೀರ್ತಿ ತಂದಿದ್ದಾಳೆ.
2025-26ನೇ ಸಾಲಿನ ಪಿಯುಸಿ ವಿಜ್ಞಾನ ವಿಭಾಗದಲ್ಲಿ(PCMCS) 97.67% ಅಂಕಗಳನ್ನು ಪಡೆಯುವ ಮೂಲಕ ಅತ್ಯುನ್ನತ ಸಾಧನೆ ಮಾಡಿದ್ದಾಳೆ. ಆದರೆ, ಈ ಅಮೋಘ ಅಂಕಗಳ ಹಿಂದೆ ಕಣ್ಣೀರು ಮತ್ತು ಕಠಿಣ ಪರಿಶ್ರಮದ ಕಥೆಯಿದೆ.
ತಾಯಿಯ ತ್ಯಾಗ – ಮಗಳ ಅಚಲ ಗುರಿ
ಕುಂದಾಪುರ ಮೊಳಹಳ್ಳಿಯ ನಿವಾಸಿ ಸರೋಜಾ ಕುಲಾಲ್ ಅವರ ಸುಪುತ್ರಿಯಾದ ಸಿಂಚನಾಳ ತಂದೆ ಬಾಲ್ಯದಲ್ಲೇ ಕುಟುಂಬ ಉಪೇಕ್ಷಿಸಿ ಬೇರೆ ಹೊರತು ಹೋದರು. ಆ ಬಳಿಕ ಇಬ್ಬರು ಪುಟ್ಟ ಮಕ್ಕಳನ್ನು ಸಾಕಿ ಸಲಹಬೇಕಾದ ಜವಾಬ್ದಾರಿ ತಾಯಿ ಸರೋಜಾ ಮೇಲೆ ಬಿತ್ತು. ಕುಟುಂಬ ಕಡು ಬಡತನದ ಕೂಪಕ್ಕೆ ತಳ್ಳಲ್ಪಟ್ಟಿತು. ಕೂಲಿನಾಲಿ ಮಾಡುತ್ತಾ ಬಂದ ಅವರು ಪ್ರಸ್ತುತ ಮನೆ ಸಮೀಪದ ಗೇರು ಬೀಜದ ಕಾರ್ಖಾನೆಯಿಂದ ಗೋಡಂಬಿ ತಂದು ಬಿಡಿಸಿ ಹಗಲಿರುಳು ಬೆವರು ಸುರಿಸಿ ಸಿಗುವ ಅಲ್ಪ ಆದಾಯದಲ್ಲೇ ಇಬ್ಬರು ಹೆಣ್ಣು ಮಕ್ಕಳನ್ನು ಸಾಕುತ್ತಿದ್ದಾರೆ.
“ತನ್ನ ಕಷ್ಟಗಳು ಮಗಳ ಓದಿಗೆ ಅಡ್ಡಿಯಾಗಬಾರದು” ಎಂಬ ಹಠದಿಂದ ದುಡಿಯುತ್ತಿರುವ ಈ ತಾಯಿಗೆ ಈಗ ಮುಂದಿನ ದಾರಿ ಕಾಣದಾಗಿದೆ. ಸಿಂಚನಾಳಿಗೆ ಮುಂದೆ ಸಿಎಸ್ ಅಥವಾ ಎಐ ಕಲಿಯಬೇಕೆಂಬ ಬಯಕೆ. ಆಕೆಯ ತಂಗಿ ಸೌಜನ್ಯಾ ಬಿದ್ಕಲ್ ಕಟ್ಟೆ ಕರ್ನಾಟಕ ಪಬ್ಲಿಕ್ ಸಹಳೆಯಲ್ಲಿ 9ನೇ ತರಗತಿ ಕಲಿಯುತ್ತಿದ್ದಾಳೆ.
“ನಾನು ಓದಿನ ನಡುವೆ ಸಿಗುವ ಬಿಡುವಿನ ವೇಳೆಯಲ್ಲಿ ಕೆಲಸವನ್ನೂ ಮಾಡಬಲ್ಲೆ ಎನ್ನುವ ಆಕೆಗೆ ನಿಮ್ಮ ಒಂದು ಪುಟ್ಟ ನೆರವು, ಒಂದು ಬದುಕನ್ನು ರೂಪಿಸಬಲ್ಲದು. ವಿಜ್ಞಾನ ವಿಭಾಗದಲ್ಲಿ ಅಸಾಧಾರಣ ಅಂಕ ಗಳಿಸಿರುವ ಸಿಂಚನಾಳಿಗೆ ಉನ್ನತ ಶಿಕ್ಷಣ ಪಡೆಯುವ ತೀವ್ರ ಹಂಬಲವಿದೆ. ಆದರೆ, ಗೇರು ಬೀಜದ ಸಿಪ್ಪೆ ಸುಲಿದು ಸಿಗುವ ಅಲ್ಪ ಸಂಬಳದಲ್ಲಿ ಮಗಳ ದೊಡ್ಡ ಕನಸುಗಳನ್ನು ನನಸು ಮಾಡುವುದು ಆ ತಾಯಿಗೆ ಅಸಾಧ್ಯದ ಮಾತಾಗಿದೆ. ಇಂದಿನ ಕಾಲದಲ್ಲಿ ಸಕಲ ಸೌಲಭ್ಯಗಳಿದ್ದರೂ ದಾರಿ ತಪ್ಪುವ ಹದಿಹರೆಯದವರ ನಡುವೆ, ಬಡತನ ಮತ್ತು ಅನಾಥ ಪ್ರಜ್ಞೆಯನ್ನು ಮೆಟ್ಟಿ ನಿಂತು ಸಾಧನೆಯ ಶಿಖರವೇರಿದ ಬಾಲಕಿಗೆ ನೆರವಿನ ಹಸ್ತಚಾಚಬೇಕಾಗಿದೆ.
ನಾವೇಕೆ ನೆರವಾಗಬೇಕು?
ಪ್ರತಿಭೆಗೆ ಬೆಲೆ ನೀಡಲು: 97.67% ಅಂಕಗಳು ಅವಳ ಬುದ್ಧಿವಂತಿಕೆಗೆ ಸಾಕ್ಷಿ.
ಒಂದು ಕುಟುಂಬದ ಉದ್ಧಾರಕ್ಕಾಗಿ: ಸಿಂಚನಾ ಶಿಕ್ಷಣ ಪಡೆದರೆ ಅವಳ ಇಡೀ ಕುಟುಂಬದ ಭವಿಷ್ಯವೇ ಬದಲಾಗಲಿದೆ.
ಮಾನವೀಯತೆಯ ದೃಷ್ಟಿಯಿಂದ: ಕಷ್ಟದಲ್ಲಿರುವ ಈ ಸಾಧಕಿಗೆ ಆಸರೆಯಾಗುವುದು ನಮ್ಮೆಲ್ಲರ ಕರ್ತವ್ಯ.
ಶಿಕ್ಷಣವೇ ಶಕ್ತಿ. ಈ ಪ್ರತಿಭಾವಂತ ವಿದ್ಯಾರ್ಥಿನಿ ಆರ್ಥಿಕ ಮುಗ್ಗಟ್ಟಿನಿಂದಾಗಿ ಶಿಕ್ಷಣದಿಂದ ವಂಚಿತಳಾಗಬಾರದು. ಉದಾರಿಗಳು, ಸಂಘ-ಸಂಸ್ಥೆಗಳು ಕೈಜೋಡಿಸಿದರೆ ಸಿಂಚನಾಳ ಕನಸುಗಳಿಗೆ ರೆಕ್ಕೆ ಬರಲಿದೆ. ಸಹಾಯ ಹಸ್ತ ಚಾಚಲು ಇಚ್ಛಿಸುವವರು ತಕ್ಷಣವೇ ಇವರನ್ನು ಸಂಪರ್ಕಿಸಿ ಅಥವಾ ಸಹಕರಿಸಿ. ಬ್ಯಾಂಕ್ ಖಾತೆ ವಿವರ :
Sinchana Kulal
S.B Account number: 110084624662
IFSC code:CNRB0010162
Name and address of Branch:
Bidkalkatte
Canara Bank
Main road, Bidkalkatte-post, Udupi district
ಸಂಪರ್ಕ +91 97409 47485



