ಮಂಗಳೂರು : ನರಿಂಗಾನ ಗ್ರಾಮದ ಕಂಬ್ಲ ಎಂಬಲ್ಲಿ ಕುಲಾಲ ಸಮುದಾಯದ ಬಂಜನ್ ಕುಟುಂಬಸ್ಥರ ಸೇವೆಯಾಗಿ ನರಿಂಗಾನದ ಶ್ರೀ ಮಲರಾಯ ಬಂಟ ಪಿಲಿಚಾಮುಂಡಿ ದೈವಗಳಿಗೆ ಜನವರಿಯಲ್ಲಿ ಸಮರ್ಪಣೆಯಾಗಲಿರುವ ಧರ್ಮ ನೇಮದ ಸಿದ್ಧತಾ ಸಭೆ ಕಂಬ್ಲ ತರವಾಡು ಮನೆಯಲ್ಲಿ ಇತ್ತೀಚೆಗೆ ನಡೆಯಿತು.
ವೇದಮೂರ್ತಿ ಮುನ್ನೂರು ಎಂ.ಎಸ್ ತಂತ್ರಿಯವರ ಮಾರ್ಗದರ್ಶನದಲ್ಲಿ ಬೊಳ್ಮಾರ್ ಗುತ್ತು ಶಶಿಧರ ಭಟ್ ಹಾಗೂ ಅಖಿಲೇಶ್ ಆಚಾರ್ಯ ಅವರ ಪೌರೋಹಿತ್ಯದಲ್ಲಿ ನಡೆಯಲಿರುವ ಧರ್ಮನೇಮವು ಜ.22 ರಿಂದ 30ರವರೆಗೆ ನಡೆಯಲಿದೆ. ಧರ್ಮನೇಮದ ಅಂಗವಾಗಿ ನಾಗದೇವರಿಗೆ ವಿಶೇಷ ತನುತರ್ಪಣ ಸೇವೆ ಹಾಗೂ ಇತರ ಧಾರ್ಮಿಕ ವಿಧಿ ವಿಧಾನಗಳ ಬಳಿಕ ಧರ್ಮ ದೈವಗಳಿಗೆ ಧರ್ಮನೇಮ ಹಾಗೂ ಕುಟುಂಬದ ದೈವಗಳಿಗೆ ಕೋಲೋತ್ಸವ ನಡೆಯಲಿದೆ ಎಂದು ಚಂದ್ರಶೇಖರ ಜಲ್ಲಿ ಮಾಹಿತಿ ನೀಡಿದರು.
ಸಭೆಯಲ್ಲಿ ಶಂಕರ್ ಭಟ್ ದೋಸೆಮನೆ, ಸದಾಶಿವ ಭಟ್ ಜಲ್ಲಿ, ನಾರಾಯಣ ಭಟ್ ಬಡಕಾಯಿ, ನರಿಂಗಾನ ದೇವಸ್ಥಾನದ ಆಡಳಿತ ಮೊಕ್ತೇಸರ ಶೈಲೇಂದ್ರ ಭರತ್ ನಾಯ್ಕ್, ವಿಠಲ ಆಳ್ವ ಭಂಡಾರಮನೆ, ಲಕ್ಷ್ಮಣ ಕಣಂತೂರು, ಗಂಗಯ್ಯ ನಲಿಕೆ ಕನ್ಯಾನ, ಚಂದ್ರಶೇಖರ ಮಾರಿಪಲ್ಲ., ಪದ್ಮನಾಭ ನರಿಂಗಾನ, ಕೋಟ್ಯಪ್ಪ ಸಾಲಿಯಾನ್, ಬೂಬ ಮೂಲ್ಯ ಪಟ್ಟೋರಿ, ನಾರಾಯಣ, ಗಿರೀಶ್ ಬಾಳೆಪುಣಿ, ಶಶಿಧರ ಪೊಯ್ಯತ್ತಬೈಲ್, ಮೋನಪ್ಪ ಮೂಲ್ಯ, ನಾಗಮ್ಮ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.