ಮೂಡಬಿದ್ರೆ(ಕುಲಾಲ ವರ್ಲ್ಡ್ ಡಾಟ್ ಕಾಮ್): ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಕಳೆದ ಜನವರಿಯಲ್ಲಿ ನಡೆಸಿದ ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ ಬಿ.ಕಾಂ ಪದವಿ ವಿದ್ಯಾರ್ಥಿನಿ ಶ್ರೇಯಾ ಬಂಗೇರ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ. ಇವರ ಜೊತೆಗೆ ಕಾಲೇಜಿನ ಇತರ 13 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಆಳ್ವಾಸ್ ಕಾಲೇಜು ಶೇಕಡಾ 31 ಫಲಿತಾಂಶ ಪಡೆದಿದೆ. ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ ಆಳ್ವ, ಪ್ರಾಂಶುಪಾಲ ಡಾ| ಕುರಿಯನ್ ಹಾಗೂ ಬೋಧಕ-ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ. ಶ್ರೇಯಾ ಬಂಗೇರ ಅವರು ಇರ್ವತ್ತೂರು ಪಾಲಾಜೆ ಸತೀಶ್ ಬಂಗೇರ ಹಾಗೂ ರೂಪಾ ಎಸ್ ಬಂಗೇರ ದಂಪತಿಯ ಸುಪುತ್ರಿ.

