ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಕೊಲ್ಯ ಕುಲಾಲ ಸಂಘದ ಮಹಿಳಾ ಘಟಕದ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಿರಿಯ ನ್ಯಾಯವಾದಿ ಗೌರಿ ಕೆ.ಎಸ್ ಉದ್ಘಾಟಿಸಿ ಮಾತನಾಡಿದರು. ಮಹಿಳಾ ಘಟಕದ ಅಧ್ಯಕ್ಷರಾದ ಹರಿಣಾಕ್ಷಿ ಟೀಚರ್ ಸಭಾಧ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷರಾದ ಲ.ಅನಿಲ್ ದಾಸ್ , ಉಪಾಧ್ಯಕ್ಷರಾದ ರೇಖಾ ರಾಜೇಶ್ , ಜಯಶ್ರೀ ಪ್ರಪುಲ್ಲಾದಾಸ್ ಉಪಸ್ಥಿತರಿದ್ದರು. ಇದೇ ಸಂದರ್ಭ ರಾಧಾ ಗೋಪಾಲ್ ಹಾಗೂ ಸೀತಾ ಭಾಸ್ಕರ್ ಇವರನ್ನು ಗೌರವಿಸಲಾಯಿತು.


