ಕಾರ್ಕಳ(ಕುಲಾಲ ವರ್ಲ್ಡ್ ಡಾಟ್ ಕಾಮ್): ಕುಕ್ಕುಂದೂರುನ ಮೇಲ್ಜಡ್ಡು ಬಳಿಯಲ್ಲಿ 2 ಕುಟುಂಬಗಳಿಗೆ ಹಕ್ಕು ಪತ್ರ ನೀಡುವಂತೆ ಹಾಗೂ ಆ ಕುಟುಂಬಗಳಿಗೆ ರಕ್ಷಣೆ ನೀಡುವಂತೆ ಕುಲಾಲ ಸಂಘಗಳು ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡಿದೆ. ಜಯಂತಿ ಆಚಾರ್ಯ ಹಾಗೂ ಗುಲಾಬಿ ಮೂಲ್ಯ ಆ 2 ಮನೆಗಳಿಗೆ ಭೇಟಿ ಮಾಡಿದ ನಾನಿಲ್ತಾರ್ ಕುಲಾಲ ಸಂಘ, ಕಾರ್ಕಳ ಕುಲಾಲ ಸಂಘ, ಹೊಸ್ಮಾರು ಕುಲಾಲ ಸಂಘ ಹಾಗೂ ಇರ್ವತ್ತೂರು ಕುಲಾಲ ಸಂಘದ ಸದಸ್ಯರು ಆ ಮನೆಯವರ ರಕ್ಷಣೆಗೆ ತಮ್ಮ ಸಹಕಾರ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಾನಿಲ್ತಾರ್ ಕುಲಾಲ ಸಂಘದ ಮಾಜಿ ಅಧ್ಯಕ್ಷರಾದ ಕುಶ ಮೂಲ್ಯರವರು ಈ ಕುಟುಂಬ ಕಳೆದ 35 ವರ್ಷಗಳ ಹಿಂದೆ ಅಲ್ಲಿ ಮನೆ ಕಟ್ಟಿಕೊಂಡಿದ್ದು ಅವರಿಗೆ ಸ್ಥಳೀಯ ವ್ಯ್ಯಕ್ತಿಯೊಬ್ಬರು ರಾಜಕೀಯ ಪ್ರಭಾವ ಬಳಸಿ ಅನಾವಶ್ಯಕ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದರು. ಬಳಿಕ ಅಲ್ಲಿಂದ ತಹಸೀಲ್ದಾರ್ ರಿಗೆ ಮನವಿ ಮಾಡಲಾಯಿತು. ಈ ಸಮಸ್ಯೆ ಹಲವಾರು ವರ್ಷಗಳಿಂದ ಇದ್ದು ಇದನ್ನು ಪರಿಹಾರ ಮಾಡುವಂತೆ ಆಗ್ರಹಿಸಲಾಯಿತು.
ಅಲ್ಲಿಂದ ಪೊಲೀಸ್ ಇಲಾಖೆಗೆ ಮನವಿ ಮಾಡಿ ಆ ಎರಡು ಕುಟುಂಬಗಳಿಗೆ ರಕ್ಷಣೆ ನೀಡುವಂತೆ ಮನವಿ ನೀಡಲಾಯಿತು. ಜಯರಾಮ್ ಬಂಗೇರ ಕೆರ್ವಾಶೆ, ಜಗನ್ನಾಥ ಕುಲಾಲ್ ಬೆಳ್ಮಣ್ ವಿಠಲ್ ಕುಲಾಲ್ ಬೆಲಾಡಿ, ಬೊಗ್ಗು ಮೂಲ್ಯ ಬೇಲಾಡಿ, ರಮೇಶ್ ಮಾಳ, ಜ್ಯೋತಿ ಕುಲಾಲ್ ಪದವು, ಜ್ಯೋತಿ ಬಾರಡಿ, ಗೋಪಾಲ ಮೂಲ್ಯ, ಸಂತೋಷ ಕುಲಾಲ್ ಪದವು, ಚಂದ್ರ ಮೂಲ್ಯ ರಾಜೇಶ್ ಕುಲಾಲ ಸಾಂತೂರ್, ಚಿತ್ರೀಶ್ ಕುಲಾಲ್ ಇನ್ನಾ, ನಿಲೇಶ್ ಕುಲಾಲ, ಪ್ರೇಮ್ ಕುಲಾಲ್, ರಾಜೇಶ್ ಕುಲಾಲ್ ಇನ್ನಾ, ನಾಗೇಶ್ ಕುಲಾಲ್ ಬೆಳ್ಮಣ್, ವಿಕಾಸ್ ಕುಲಾಲ್, ಶಶಿಧರ್ ಕುಲಾಲ್ ಕೆರ್ವಾಷೆ, ಸುರೇಶ್ ಬಂಗೇರ ಪಾಲಜೆ, ದೇವಪ್ಪ ಕುಲಾಲ್ ನಿಟ್ಟೆ , ಶಂಕರ್ ಕುಲಾಲ್ ಗುರ್ಬೇಟ್ಟು ಮತ್ತಿತರರು ಭಾಗವಹಿಸಿದ್ದರು.
ಈ ಹಿಂದೆ ಕಾರ್ಕಳ ಕುಲಾಲ ಸಂಘದ ಮಾಜಿ ಅಧ್ಯಕ್ಷರಾದ ಭೋಜ ಕುಲಾಲ್, ಕಾರ್ಕಳ ಕುಲಾಲ ಸಂಘದ ಅಧ್ಯಕ್ಷ ಹರೀಶ್ಚಂದ್ರ ಕುಲಾಲ್, ಸುರೇಂದ್ರ ಕುಲಾಲ್, ದಿವಾಕರ್ ಬಂಗೇರ ಕೃಷ್ಣ ಕುಲಾಲ್, ವಸಂತ್ ಕುಲಾಲ್, ವಿಜೇಶ್ ಕುಲಾಲ್, ದೇವಪ್ಪ ಕುಲಾಲ್, ವಿನಯ ಧವಳ ಕೀರ್ತಿ ಹಾಗೂ ಸದಸ್ಯರು ಸಂತ್ರಸ್ತರ ಮನೆಗೆ ಭೇಟಿ ನೀಡಿ ಅವಲೋಕನ ಮಾಡಿದ್ದರು.



