ಪುತ್ತೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಕಬಕ ನೆಹರೂನಗರ ಸಪರಿವಾರ ಸೋಮಲಿಂಗೇಶ್ವರ ಮಂದಿರ ಇವರ ವತಿಯಿಂದ ಗಾಯಕಿ ಮಧುಲತಾ ಪುತ್ತೂರು ಅವರಿಗೆ `ಗಾನಶ್ರೀ’ ಬಿರುದು ನೀಡಿ ಸನ್ಮಾನಿಸಲಾಯಿತು.
ಮಧುಲತಾ ಮನೋಜ್ ಕುಲಾಲ್ ಅವರು ಎಚ್.ಎಸ್.ಮನುಕುಮಾರ್ ಶಿವನಗರ ಇವರ ಸಾಹಿತ್ಯ ರಚನೆಯಲ್ಲಿ ಪುತ್ತೂರಿನ ಲಿಂಗದ ಗುಡ್ಡೆಯ ಶ್ರೀ ಸೋಮಲಿಂಗೇಶ್ವರ ಮಂದಿರದ ಚರಿತ್ರೆಯನ್ನು ಬಿಂಬಿಸುವ ಭಕ್ತಿಗೀತೆಯನ್ನು ತಮ್ಮ ಅದ್ಭುತ ಕಂಠಸಿರಿಯಲ್ಲಿ ಹಾಡಿ, ಧ್ವನಿಮುದ್ರಣ ಗೊಳಿಸಿ, ಎಲ್ಲ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ಹಾಡು ಕಬಕದ ಶ್ರೀರಾಜ್ ಮ್ಯೂಸಿಕ್ ವರ್ಲ್ಡ್ ಸ್ಟುಡಿಯೋದಲ್ಲಿ ಧ್ವನಿ ಮುದ್ರಣ ಗೊಂಡಿದ್ದು ಜನವರಿ 01 – 2026 ರಂದು ಮಂದಿರದ ಪ್ರತಿಷ್ಠಾ ದಿನದ ಶುಭಸಂದರ್ಭದಲ್ಲಿ ಈ ಹಾಡು ಬಿಡುಗಡೆಗೊಂಡಿರುತ್ತದೆ. ಇವರ ಹಾಡಿನ ಪ್ರತಿಭೆಯನ್ನು ಗುರುತಿಸಿ ಮಂದಿರದ ಆಡಳಿತ ಸಮಿತಿಯ ವತಿಯಿಂದ ‘ಗಾನಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.



