ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಬಿಜೆಪಿ ಮುಖಂಡ ಹಾಗೂ ದಿ ಮೈಸೂರು ಇಲೆಕ್ಟ್ರಿಕಲ್ಸ್ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರ ವೈಯಕ್ತಿಕ ನೆಲೆಯಲ್ಲಿ ಅಶಕ್ತ ಕುಟುಂಬಗಳಿಗೆ ನಿರ್ಮಿಸಿಕೊಡುತ್ತಿರುವ ಮನೆಗಳ ಯೋಜನೆ `ನಮೋ ಕುಟೀರ’ ಏಳನೇ ಮನೆಯನ್ನು ಫೆ.೨೫ರಂದು ಹಸ್ತಾಂತರ ಮಾಡಲಾಯಿತು.
ಕುರ್ನಾಡು ಅಬೆಮಾರು ಎಂಬಲ್ಲಿ ವಾಸವಿರುವ ವಿಜಯ ಮೂಲ್ಯ ಮತ್ತು ರುಕ್ಮಯ ಮೂಲ್ಯಎಂಬ ಮಕ್ಕಳಿಲ್ಲದ ವೃದ್ಧ ದಂಪತಿ ಜೋಪಡಿಯಂತಹ ಮನೆಯಲ್ಲಿ ಹಲವಾರು ವರ್ಷಗಳಿಂದ ವಾಸವಾಗಿದ್ದು, ಇವರ ದಯನೀಯ ಪರಿಸ್ಥಿತಿಯನ್ನು ಕಂಡ ಅವರಿಗೆ ಮನೆ ನಿರ್ಮಿಸಿಕೊಡುವ ಸಂಕಲ್ಪ ಮಾಡಿದ್ದರು. ಅದರಂತೆ ಮೂರು ತಿಂಗಳ ಅವಧಿಯಲ್ಲಿ ಹೊಸ ಮನೆ ನಿರ್ಮಾಣಗೊಂಡಿದ್ದು ಅದರ ಗೃಹಪ್ರವೇಶ ಫೆ.೨೫ರಂದು ನಡೆಯಿತು. ಈ ಸಂದರ್ಭ ಆರೆಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಸಂಸದ ಬ್ರಿಜೇಶ್ ಚೌಟ, ಅಣ್ಣಯ್ಯ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.


