ಮೂಡುಬಿದಿರೆ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಯಕ್ಷಗಾನೀಯ ಮೊಸರು ಕುಡಿಕೆ ಖ್ಯಾತಿಯ ಇಲ್ಲಿನ ಗೋಪಾಲಕೃಷ್ಣ ದೇವಸ್ಥಾನದ ಮೊಸರು ಕುಡಿಕೆ ಉತ್ಸವದಲ್ಲಿ ಶ್ರೀಕೃಷ್ಣ ವೇಷಧಾರಿಯ ಯಕ್ಷಗಾನ ತಂಡದ ನೇತೃತ್ವ ವಹಿಸುತ್ತಿದ್ದ ಹಿರಿಯ ಭಾಗವತ ಹಾಗೂ ಮದ್ದಳೆ ಕಲಾವಿದ ಮಳಲಿ ಸುಧಾಕರ ಕುಲಾಲ್ ಯಾನೆ ದಾಸಪ್ಪ(78) ಅವರು ಫೆ. 10 ರಂದು ಮಳಲಿಯಲ್ಲಿ ನಿಧನ ಹೊಂದಿದರು.
6 ದಶಕಗಳಿಂದಲೂ ಮಳಲಿಯಲ್ಲಿ ಟೈಲರಿಂಗ್ ವೃತ್ತಿ ನಡೆಸುತ್ತಿದ್ದ ಅವರು ವೃತ್ತಿಯ ಜತೆಗೆ ಮಳಲಿಯ ಶ್ರೀ ರಾಮಾಂಜನೇಯ ಯಕ್ಷಗಾನ ಮಂಡಳಿಯಲ್ಲಿ ಭಾಗವತರಾಗಿ, ವೇಷಧಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ರಾಮಾಂಜನೇಯ ಭಜನಾ ಮಂಡಳಿಯಲ್ಲಿ ಸಕ್ರಿಯರಾಗಿದ್ದ ಅವರು ಇತ್ತೀಚೆಗೆ ನಡೆದ ಮಂಡಳಿಯ 75ನೇ ವರ್ಷಾಚರಣೆಯಲ್ಲಿ ಗೌರವಾಧ್ಯಕ್ಷರಾಗಿ ಸಮ್ಮಾನಿಸಲ್ಪಟ್ಟಿದ್ದರು. ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ.

