ಕಾರ್ಕಳ(ಕುಲಾಲ ವರ್ಲ್ಡ್ ಡಾಟ್ ಕಾಮ್): ಮಾರಕ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಮುಂಡ್ಕೂರಿನ ಶ್ರೀಧರ್ ಕುಲಾಲ್ರವರಿಗೆ ಸಮಾಜದ ಸಹಾಯಹಸ್ತ ಬೇಕಾಗಿದೆ.
ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದು, ಶ್ರಮಜೀವಿಯಾಗಿರುವ ಶ್ರೀಧರ್ ಕುಟುಂಬವನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದರು. ದುರಭ್ಯಾಸಗಳಿಲ್ಲದೇ ಉತ್ತಮ ಗುಣ ನಡತೆ ಹೊಂದಿದ್ದರು. ಬ್ಯಾಂಕ್ ಸಾಲ ಮಾಡಿ ಇತ್ತೀಚೆಗೆ ಹೊಸ ರಿಕ್ಷಾವನ್ನೂ ಖರೀದಿಸಿದ್ದರು, ಮನೆ ರಿಪೇರಿ ಕೂಡ ಮಾಡಿದ್ದರು.
ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಹಿರಿಯಾಕೆ ಹತ್ತನೇ ತರಗತಿ , ಕಿರಿಯವಳು ಐದನೇ ತರಗತಿಯಲ್ಲಿ ಕಲಿಯುತ್ತಿದ್ದು ಪ್ರತಿಭಾವಂತರಾಗಿದ್ದಾರೆ. ಇವರ ಪತ್ನಿ ಬೀಡಿಕಟ್ಟಿ ಮನೆಯ ಖರ್ಚಿಗೆ ನೆರವಾಗುತ್ತಿದ್ದರು. ಇದೀಗ ಮನೆಯ ಆಧಾರವಾಗಿದ್ದ ಶ್ರೀಧರ್ ಮಾರಕ ರೋಗಕ್ಕೆ ಸಿಲುಕಿದ್ದು ಬಡ ಕುಟುಂಬ ಕಂಗಾಲಾಗಿದೆ. ಶ್ರೀಧರ್ ಅವರಿಗೆ ಆರು ತಿಂಗಳ ಹಿಂದೆ ಹೊಟ್ಟೆನೋವು ಆರಂಭಗೊಂಡಿದ್ದು, ವೈದ್ಯರಿಗೆ ತೋರಿಸಿದಾಗ ಅವರಿಗೆ ಕ್ಯಾನ್ಸರ್ ಇರುವುದು ದೃಢವಾಗಿತ್ತು. ಪ್ರಸ್ತುತ ದುಡಿಯಲಾಗದೇ ಔಷಧಿ ಖರ್ಚು, ರಿಕ್ಷಾಖರೀದಿಸಲು ಹಾಗೂ ಮನೆ ರಿಪೇರಿ ಮಾಡಲು ಮಾಡಿರುವ ಬ್ಯಾಂಕ್ ಸಾಲ ಮರುಪಾವತಿ ಮಾಡಲಾಗದೇ ಒದ್ದಾಡುತ್ತಿದ್ದಾರೆ. ಪ್ರಸ್ತುತ ಈ ಕುಟುಂಬದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಈ ಬಡಕುಟುಂಬಕ್ಕೆ ಮನೆ ಯಜಮಾನನ ರಕ್ಷಿಸಿಕೊಳ್ಳಬೇಕು ಎನ್ನುವ ಧಾವಂತವಿದೆ. ಆದರೆ ಕೈಯಲ್ಲಿ ದುಡ್ಡಿಲ್ಲ. ದಾನಿಗಳ ನೆರವೇ ಅವರ ಬದುಕು ಕಟ್ಟಕೊಳ್ಳಲು ಸಹಾಯಕ. ಬೆಳ್ಮಣ್ಣಿನ ಸಮಾಜಸೇವಾ ಸಂಸ್ಥೆ ‘ಹ್ಯುಮಾನಿಟಿ’ ಅವರಿಗೆ ಆರ್ಥಿಕ ನೆರವು ನೀಡುವ ಪುಣ್ಯಕಾರ್ಯಕ್ಕೆ ಮುಂದಾಗಿದ್ದು ಯಾರಾದರು ದಾನಿಗಳು ಇವರಿಗೆ ಕನಿಷ್ಠ ರೂ. 2,000/- ದೇಣಿಗೆ ನೀಡಿದಲ್ಲಿ ‘ಹ್ಯುಮಾನಿಟಿ’ ಸಂಸ್ಥೆ ಅಷ್ಟೇ ಹೆಚ್ಚುವರಿ ಮೊತ್ತವನ್ನು ಸೇರಿಸಿ ಈ ಕುಟುಂಬಕ್ಕೆ ನೆರವು ಒದಗಿಸಲಿದೆ. ಹೆಚ್ಚಿನ ಮಾಹಿತಿಗಾಗಿ ವಾಟ್ಸಾಪ್ನಲ್ಲಿ ಸಂಪರ್ಕಿಸಿ: 9480201111
ಬ್ಯಾಂಕ್ ಮಾಹಿತಿ :
Shridhar M Kulal
A/C no: 01462250000126
IFSC code:CNRB0010146
MICR code:576015039
Canara bank
Mundkur branch


