
ದುಬೈ(ಕುಲಾಲ ವರ್ಲ್ಡ್ ಡಾಟ್ ಕಾಮ್): ಗಲ್ಫ್ ರಾಷ್ಟ್ರವಾದ ಯುಏಇ ಯಲ್ಲಿ ನೆಲೆಸಿರುವ ಕುಲಾಲ ಸಮಾಜದ ಸಂಘಟನೆ “ಕುಲಾಲ ಫ್ಯಾಮಿಲಿ ಯುಏಇ” ಇವರು ಆಯೋಜಿಸಿರುವ ಶ್ರೀಸತ್ಯನಾರಾಯಣ ದೇವರ ಪೂಜೆಯು ಫೆ. 8 ಆದಿತ್ಯವಾರ, ಗ್ಲೆಂಡೆಲ್ ಅಂತರಾಷ್ಟ್ರೀಯ ಶಾಲಾ ಸಭಾಂಗಣದಲ್ಲಿ ನಡೆಯಿತು.
ಸುಬ್ರಹ್ಮಣ್ಯ ಭಟ್ ಹಾಗೂ ಕೆ.ವಿ.ಅಡಿಗ ಇವರ ಪೌರೋಹಿತ್ಯದಲ್ಲಿ, ಪದ್ಮರಾಜ್ ಕುಲಾಲ್ ಎಕ್ಕಾರ್ ಇವರ ನೇತೃತ್ವದಲ್ಲಿ ಕುಲಾಲ ಪ್ಯಾಮಿಲಿ ಅಡ್ಮಿನ್ ಬಳಗದ ಸಂಯೋಜನೆಯಲ್ಲಿ ನಡೆದ ಪೂಜಾ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನೆರವೇರಿತು. ಕುಲಾಲ ಪ್ಯಾಮಿಲಿಯ ಸುಮಂಗಲಿಯರು, ದೀಪ ಪ್ರಜ್ವಲನೆ ಮಾಡುವ ಮೂಲಕ ಪೂಜಾ ವಿಧಿ ವಿಧಾನಗಳು ಆರಂಭಗೊಂಡಿತು. ಸುಜಾತ ಹಾಗೂ ಕಿರಣ್ ಕುಲಾಲ್ ದಂಪತಿಗಳು ಪೂಜೆಯ ಸಂಕಲ್ಪದಲ್ಲಿ ಪಾಲುಗೊಂಡರು. ಪದ್ಮರಾಜ್ ಎಕ್ಕಾರ್, ರಾಜೇಶ್ ಶೆಣೈ ಹಾಗೂ ಸಚಿನ್ ಕುಲಾಲ್ , “ವಿಷ್ಣು ಸಹಸ್ರನಾಮಾವಳಿ” ಪಠಣ ಮಾಡಿದರು.
ಶ್ರೀ ಓಂ ಶ್ರೀ ಭಕ್ತ ವೃಂದ ಶಾರ್ಜಾ ಇವರಿಂದ ಭಜನೆ ಸಂಕೀರ್ತನೆ ನಡೆಯಿತು. ಕುಲಾಲ ಸಮಾಜದ ಬಾಂಧವರು ನಡೆಸಿಕೊಟ್ಟ ಕುಣಿತ ಭಜನೆ ಸೇರಿದ ಭಕ್ತ ಜನರ ಮೆಚ್ಚುಗೆಗೆ ಪಾತ್ರವಾಯಿತು.
ವಿದುಷಿ ಮಧುರಾ ವಿಶ್ವನಾಥ್ ಇವರು ಗಾಯನದ ಮುಖೇನ ನಡೆಸಿಕೊಟ್ಟ ಸತ್ಯನಾರಾಯಣ ದೇವರ ಕಥಾ ಕಾಲಕ್ಷೇಪಕ್ಕೆ ಸೇರಿದ ಭಕ್ತ ಸಮೂಹ ಭಾವ ಪರವಶರಾದರು.
ಮಹಾಮಂಗಳಾರತಿ ಬಳಿಕ ದಾನಿಗಳನ್ನು ಗೌರವಿಸಿ, ಶ್ರೀ ದೇವರ ಪ್ರಸಾದ ನೀಡಲಾಯಿತು. ಹಾಗೂ ಭಕ್ತಾದಿಗಳು ಎಲ್ಲರೂ ಅನ್ನಸಂತರ್ಪಣೆಯ ಪ್ರಸಾದ ಸ್ವೀಕರಿಸಿ ಸಂತುಷ್ಟರಾದರು. ದುಬೈ ಯ ಹಲವು ಸಮಾಜದ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಆರತಿ ಅಡಿಗ ಕಾರ್ಯಕ್ರಮ ನಿರೂಪಿಸಿದರು.


