ಬೆಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಇತ್ತೀಚೆಗೆ ನಡೆದ ಬೆಂಗಳೂರು ಕುಲಾಲ ಸಂಘದ 55ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧನೆಗಾಗಿ ಚೇತನಾ ಕರುಣಾಕರ್ ಕುಲಾಲ್ ಅವರನ್ನು ಸನ್ಮಾನಿಸಲಾಯಿತು.
ಚೇತನಾ ಕರುಣಾಕರ್ ಕುಲಾಲ್ ಅವರು ಬೆಂಗಳೂರು ವಿಶ್ವವಿದ್ಯಾಲಯದ 2022–24ನೇ ಸಾಲಿನ ಶಿಕ್ಷಣ ಸ್ನಾತಕೋತ್ತರ (Master of Education) ವಿಭಾಗದಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದು, ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಈ ಗೌರವವನ್ನು ಅವರು ರಾಜ್ಯಪಾಲರು ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಥಾವರ್ ಚಂದ್ ಗೆಹ್ಲೋಟ್, ಹಾಗೂ ಕುಲಸಚಿವರಾದ ಡಾ. ಎಸ್.ಎಂ. ಜಯಕರ ರಿಂದ ದೀಕ್ಷಾಂತ ಸಮಾರಂಭದಲ್ಲಿ ಪಡೆದಿರುತ್ತಾರೆ. ಈ ಸನ್ಮಾನವನ್ನು ಸಂಘದ ಅಧ್ಯಕ್ಷರಾದ ದಿವಾಕರ್ ಮೂಲ್ಯ, ಹಾಗೂ ಮುಖ್ಯ ಅಥಿತಿಗಳಾದಮಹೇಶ್ ಕೃಷ್ಣಪ್ಪ, ಸುಕುಮಾರ್ ಕುಂಪಲ, ರಾಘವೇಂದ್ರ ಹೆಮ್ಮಾಡಿ, ಅನುಸೂಯ ಕೃಷ್ಣಪ್ಪ ಮೊದಲಾದವರು ನೆರವೇರಿಸಿದರು.
ಚೇತನಾ ಕರುಣಾಕರ್ ಕುಲಾಲ್ ರವರು ನೈನಾಡಿನ ಶಿವಪ್ಪ ಮೂಲ್ಯ ಮತ್ತು ಪುಷ್ಪಾವತಿ ದಂಪತಿಗಳ ಸುಪುತ್ರಿಯಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುತ್ತಾರೆ. ಅದೇ ರೀತಿ ಅವರು ಶಿಕ್ಷಣ ವಿಭಾಗದಲ್ಲಿ KSET ಪರೀಕ್ಷೆಯನ್ನು ಉತ್ತೀರ್ಣಗೊಂಡು ಕರ್ನಾಟಕಕ್ಕೆ 17ನೇ ರ್ಯಾಂಕ್ ಪಡೆದಿದ್ದಾರೆ. ಹಾಗೆಯೇ ರಾಷ್ಟ್ರಮಟ್ಟದ NET ಪರೀಕ್ಷೆಯಲ್ಲಿ 94% ಅಂಕಗಳನ್ನು ಗಳಿಸಿದ್ದಾರೆ.
ಪ್ರಸ್ತುತ ಅವರು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ (KSOU), ಮೈಸೂರಲ್ಲಿ ಶಿಕ್ಷಣ ವಿಷಯದ ಪ್ರವೇಶ ಪರೀಕ್ಷೆ ಯಲ್ಲಿ ಪ್ರಥಮ ಸ್ಥಾನ ಪಡೆದು ಪ್ರಸ್ತುತ ಪಿಎಚ್.ಡಿ. ಪದವಿಯನ್ನು ಅಭ್ಯಸಿಸುತ್ತಿದ್ದಾರೆ. ಚೇತನಾ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸಂತ ಜೋಸೆಫ್ ಅನುದಾನಿತ ಶಾಲೆ, ನೈನಾಡು , ಹೈಸ್ಕೂಲ್ ಶಿಕ್ಷಣವನ್ನು ಸರ್ಕಾರಿ ಪ್ರೌಢಶಾಲೆ ನೈನಾಡು , ಕಾಲೇಜು ಶಿಕ್ಷಣವನ್ನು ವಾಮದಪದವು ಹಾಗೂ ತಮ್ಮ ಪ್ರಥಮ ಸ್ನಾತಕೋತ್ತರ (M.Sc)(ರಸಾಯನಶಾಸ್ತ್ರ )ಪದವಿಯನ್ನು ಮಂಗಳೂರು ವಿಶ್ವವಿದ್ಯಾಲಯ, ಕೊಣಾಜೆಯಲ್ಲಿ ಪೂರ್ಣಗೊಳಿಸಿರುತ್ತಾರೆ. ನಂತರ ಮದುವೆಯಾಗಿ ಬೆಂಗಳೂರಿಗೆ ಬಂದಮೇಲೆ ತಮ್ಮ ಮಗನ ಆರೈಕೆ ಜೊತೆಗೆ B. Ed. ಅನ್ನು ಕೂಡ ಪೂರ್ಣಗೊಳಿಸಿರುತ್ತಾರೆ. ಇತ್ತೀಚೆಗೆ ಪುಂಜಾಲಕಟ್ಟೆ ಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಶಿಕ್ಷಣ ಕ್ಷೇತ್ರ ದಲ್ಲಿ ಮಾಡಿದ ಸಾಧನೆಗಾಗಿ ಸ್ವಸ್ತಿ ಶ್ರೀ ರಾಜ್ಯ ಪ್ರಶಸ್ತಿಯೊಂದಿಗೆ ಗೌರವಿಸಲ್ಪಟ್ಟಿದ್ದಾರೆ.


