ಬೆಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಶಾಖೆ, ಬೆಂಗಳೂರು ಹಾಗೂ ಭಾರತೀಯ ವೈದ್ಯಕೀಯ ಸಂಘದ ಬರಹಗಾರರ ಸಮಿತಿ ಹಾಗೂ ಹರಿವು ಬುಕ್ಸ್ ಇವರ ಸಹಯೋಗದಲ್ಲಿ ಡಾ ಅಣ್ಣಯ್ಯ ಕುಲಾಲ್ ಉಳ್ತೂರು ಅವರ ಪ್ರಧಾನ ಸಂಪಾದಕೀಯದ ಪುಸ್ತಕ “ಸಿರಿಂಜ್ ಹಿಡಿವ ಕೈ ಪೆನ್ನು ಹಿಡಿದಾಗ – ಆವೃತ್ತಿ 02” ಜನವರಿ 24 ರಂದು ಶನಿವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರು ಮೆಡಿಕಲ್ ಕಾಲೇಜ್ ಹತ್ತಿರದ ಮಿಂಟೋ ಕಣ್ಣಿನ ಆಸ್ಪತ್ರೆಯ ಟಿಪ್ಪು ಸುಲ್ತಾನ ಅರಮನೆ ರಸ್ತೆಯ ಭಾರತೀಯ ವೈದ್ಯಕೀಯ ಸಂಘದ ಸಬಾಂಗಣದಲ್ಲಿ ನಡೆಯಲಿದೆ. ತಮ್ಮ ವೃತ್ತಿ ಬದುಕಿನ ನಡುವೆ ನಡೆವ ಅನುದಿನದ ವೈದ್ಯರ ಜೀವ, ಜೀವನ, ಜಯ-ಜಂಜಾಟಗಳ ಒಳನೋಟವನ್ನು ಈ ಕೃತಿಯಲ್ಲಿ ಸಾದರಪಡಿಸಲಾಗಿದೆ.
ಭಾರತೀಯ ವೈದ್ಯಕೀಯ ಸಂಘ ರಿ. ಕರ್ನಾಟಕ ರಾಜ್ಯ ಶಾಖೆ ಇದರ ಅಧ್ಯಕ್ಷರಾದ ಡಾ. ಟಿ.ಎ. ವೀರಭದ್ರಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಡಾ. ಸೂರಿ ರಾಜು ವಿ. (ಗೌರವ ಕಾರ್ಯದರ್ಶಿ, ಐಎಂಎ ಕರ್ನಾಟಕ ಶಾಖೆ) ಹಾಗೂ ಡಾ. ಇಂದಿರಾ ದೊಡ್ಡ ಬಳ್ಳಾಪುರ (ಅಧ್ಯಕ್ಷರು, ಐ.ಎಂ.ಎ. ಕನ್ನಡ ವೈದ್ಯ ಬರಹಗಾರರ ಉಪಸಮಿತಿ) ಇವರು ಉಪಸ್ಥಿತರಿರುವರು.


