ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಮಣಿಪಾಲ್ ಇಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರೇಷ್ಮಾ ಅವರು ಸಲ್ಲಿಸಿದ ಸಂಶೋಧನಾ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾನಿಲಯವು ಪಿಎಚ್.ಡಿ. ಪದವಿಯನ್ನು ಪ್ರದಾನ ಮಾಡಿದೆ.
ರೇಷ್ಮಾ ಅವರು ಕುವೆಂಪು ವಿಶ್ವವಿದ್ಯಾನಿಲಯದ ಮ್ಯಾನೇಜ್ ಮೆಂಟ್ ಸ್ಟಡೀಸ್ ಇದರ ಹಿರಿಯ ಪ್ರೊಫೆಸರ್ ಡಾ. ಎಚ್. ಎನ್. ರಮೇಶ್ ಅವರ ಮಾರ್ಗದರ್ಶನದಲ್ಲಿ ‘ಪರ್ಫಾರ್ಮೆನ್ಸ್ ಇವಾಲ್ಯುವೇಷನ್ ಆಫ್ ಮ್ಯೂಚುವಲ್ ಫಂಡ್ಸ್ -ಎ ಕಂಪಾರೇಟಿವ್ ಸ್ಟಡಿ ಆನ್ ಸೆಲೆಕ್ಟ್ ಈಕ್ವಿಟಿ ಆಂಡ್ ಡೆಟ್ ಫಂಡ್ಸ್ ಇನ್ ಇಂಡಿಯಾ ’ ಎಂಬ ವಿಷಯವಾಗಿ ಸಂಶೋಧನೆ ನಡೆಸಿ ಪ್ರಬಂಧ ಮಂಡಿಸಿದ್ದರು. ರೇಷ್ಮಾ ಅವರು ಬಜಾಲ್ ನಿವಾಸಿ ದಿ. ಬಿ. ಹೂವಯ್ಯ ಬಂಗೇರ ಮತ್ತು ರೇವತಿ ದಂಪತಿಯ ಸುಪುತ್ರಿಯಾಗಿದ್ದು, ಉಡುಪಿಯ ಸುರೇಶ್ ಬಂಗೇರ ಅವರ ಧರ್ಮಪತ್ನಿಯಾಗಿರುತ್ತಾರೆ.

