ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಕುಲಾಲ ಸಂಘ ಮುಂಬಯಿ ವತಿಯಿಂದ ಮಂಗಳೂರು ನಗರದ ಮಂಗಳಾದೇವಿಯಲ್ಲಿ 15ಕೋಟಿ ರೂ ವೆಚ್ಚದ ನೂತವಾಗಿ ನಿರ್ಮಾಣ ಗೊಂಡ ಹವಾನಿಯಂತ್ರಿತ ಕುಲಾಲ ಭವನವು 23ರಂದು ಆದಿತ್ಯವಾರ ಲೋಕಾರ್ಪಣೆಗೊಳ್ಳಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಮತ್ತು ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಅಶೀರ್ವಚನ ನೀಡಲಿದ್ದಾರೆ. ಕುಲಾಲ ಸಂಘ ಮುಂಬಯಿಯ ಅಧ್ಯಕ್ಷ ರಘು ಎ. ಮೂಲ್ಯ ಅಧ್ಯಕ್ಷತೆ ವಹಿಸ ಲಿದ್ದು, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಭಾಗವಹಿಸ ಲಿದ್ದಾರೆ. ಸಚಿವ ತಂಗಡಗಿ ಸಂಗಪ್ಪ ಶಿವರಾಜ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಸಹಿತ ಇತರ ಗಣ್ಯರು ಭಾಗವಹಿಸಲಿದ್ದಾರೆ ಹಾಗೂ ದಾನಿಗಳಿಗೆ ಸಮ್ಮಾನ ಕಾರ್ಯಕ್ರಮ ನಡೆಯಲಿದೆ.
ನ.21ರಂದು ಸಂಜೆ, 6ಕ್ಕೆ ವಾಸ್ತುಪೂಜೆ, ಬಲಿ ಪೂಜೆ ಮತ್ತು ಸುದರ್ಶನ ಹೋಮ ನ 22ರಂದು ಬೆಳಗ್ಗೆ ಗಣಹೋಮ, 11.30ಕ್ಕೆ ಶ್ರೀ ಸತ್ಯನಾರಾಯಣ ಮಹಾಪೂಜೆ, 24ರಂದು ಮುಂಬೈ ಕುಲಾಲರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಕುಲಾಲ ಭವನದ ವಿಶೇಷತೆ:
2015ರ ಮೇ 3ರಂದು ಕುಲಾಲ ಸಂಘ ಮುಂಬಯಿ ವತಿಯಿಂದ ಬಹುಕೋಟಿ ವೆಚ್ಚದಲ್ಲಿ ನೂತನ ಕುಲಾಲ ಭವನ ಕಾಮಗಾರಿ ಆರಂಭಿಸಿ ಸಮಾಜ ಬಾಂಧವರ ಹಾಗೂ ದಾನಿಗಳ ಸಹಾಯದಿಂದ ಅತ್ಯಾಧುನಿಕ ಸೌಲಭ್ಯ ಹೊಂದಿದ ಕುಲಾಲ ಭವನ ನಿರ್ಮಾಣಗೊಂಡಿದೆ. ಭವನದಲ್ಲಿ ಒಂದು ಸಾವಿರ ಆಸನವನ್ನು ಒಳಗೊಂಡ ಹವಾನಿಯಂತ್ರಿತ ಸುಮಿತ್ರ ರಾಜು ಸಾಲ್ಯಾನ್ ಸಭಾಂಗಣ ಹಾಗೂ ನಮ್ರತಾ ಜಗದೀಶ್ ಬಂಜನ್ ಬ್ಯಾಂಕ್ವೆಟ್ ಹಾಲ್ ಸಭಾಂಗಣವು ಒಳಗೊಂಡಿದೆ.
ಶೋಭಾಯಾತ್ರೆ:
ನ.23ಕ್ಕೆಬೆಳಗ್ಗೆ 8.30ಕ್ಕೆಮಂಗಳಾದೇವಿ ಕ್ಷೇತ್ರದಿಂದ ಶೋಭಾಯಾತ್ರೆ ನಡೆಯಲಿದ್ದು, ಒಡಿಯೂರು ಮತ್ತು ಮಾಣಿಲ ಶ್ರೀಗಳು ಅಶೀರ್ವಚನ ನೀಡಲಿದ್ದಾರೆ. ನೂತನ ಸಭಾಭವನದ ಉದ್ಘಾಟನೆಯ ಬಳಿಕ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

