ಮೂಡುಬಿದಿರೆ(ಕುಲಾಲ ವರ್ಲ್ಡ್ ಡಾಟ್ ಕಾಮ್) : ರೋಟರಿ ಆಂಗ್ಲ ಮಾಧ್ಯಮ ಶಾಲೆ ಜ್ಯೋತಿ ನಗರ ಮೂಡುಬಿದಿರೆ ಇಲ್ಲಿಯ ಶಿಕ್ಷಕರಾದ ಮೋಹನ್ ಹೊಸ್ಮಾರ್ ಇವರು Veyil Foundation, Bangalore under by the Central Government of India, Ministry of Corporate Affairs ಕೊಡ ಮಾಡುವ `ರಬೀಂದ್ರ ರತ್ನ ಪುರಸ್ಕಾರ 2025′ ವನ್ನು ಪಡೆದುಕೊಂಡಿರುತ್ತಾರೆ.
ಇವರು 2023 ರಲ್ಲಿ ಶಿಕ್ಷಾ ರತ್ನ ಪ್ರಶಸ್ತಿ, 2024 ರಲ್ಲಿ ಕರ್ನಾಟಕ ಯುವರತ್ನ ಪ್ರಶಸ್ತಿ ಹಾಗೂ 2025ರಲ್ಲಿ ಕುಲಾಲ ಯುವ ಸಾಧಕ ಪ್ರಶಸ್ತಿಯನ್ನೂ ತನ್ನ ಮುಡಿಗೇರಿಸಿಕೊಂಡಿದ್ದಾರೆ. ಇವರು ಹೊಸ್ಮಾರ್ ನಿವಾಸಿ ರುಕ್ಮಿಣಿ ಹಾಗೂ ರಾಮಕೃಷ್ಣ ಮೂಲ್ಯ ಇವರ ಸುಪುತ್ರ. ಶಿಕ್ಷಣದ ಜೊತೆಗೆ ಜಾನಪದ , ರಂಗಕಲೆ ಹಾಗೂ ಹಲವಾರು ಸಮಾಜಮುಖಿ ಕಾರ್ಯಚಟುವಟಿಕೆಗಳಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು ಶ್ರೀ ಶಾರದಾ ನಾಟ್ಯಾಲಯ ಮೂಡುಬಿದಿರೆಯ ನಿರ್ದೇಶಕರೂ ಆಗಿದ್ದಾರೆ.

