ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಮನೆಗೆ ಆಧಾರವಾಗಿದ್ದು ಇತ್ತೀಚೆಗೆ ನಡೆದ ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಮೃತಪಟ್ಟ ನರಿಕೊಂಬು ಗ್ರಾಪಂ ಸದಸ್ಯ ಅರುಣ್ ಕುಲಾಲ್ (45) ಮತ್ತು ಅವರ ಪುತ್ರ ಧ್ಯಾನ್ (15) ಅವರ ಕುಟುಂಬಕ್ಕೆ ಕುಲಾಲ ಸಂಘ ಬೆಂಗಳೂರು ವತಿಯಿಂದ ಒಟ್ಟು 1,07,000 ( ಒಂದು ಲಕ್ಷದ ಏಳು ಸಾವಿರ) ರೂಪಾಯಿ ನೆರವು ನೀಡಲಾಯಿತು.

ಬೆಂಗಳೂರಿನಲ್ಲಿ ವಾಸವಿರುವ ಸಮಾಜ ಬಾಧವರಲ್ಲಿ ಸಹಾಯಧನಕ್ಕಾಗಿ ವಿನಂತಿ ಮಾಡಿಕೊಂಡಂತೆ, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ವಿಶ್ವನಾಥ್ ಕುಲಾಲ್ ರವರ ಗೂಗಲ್ ಪೇ, ಪೋನ್ ಪೇ ಮತ್ತು ಅಕೌಂಟ್ ನಂಬರ್ ನೀಡಿದ್ದು, ಆ ಮೂಲಕ ರೂ.86,000 ಕ್ರೋಢೀಕರಣವಾಗಿದ್ದು, ಆ ಮೊತ್ತವನ್ನು ಅರುಣ್ ಕುಲಾಲ್ ಅವರ ಪತ್ನಿ ಜಯಮಾಲಿನಿರವರ ಖಾತೆಗೆ ಸಂದಾಯ ಮಾಡಲಾಯಿತು.
ಬೆಂಗಳೂರಿನ ಇನ್ನೂ ಕೆಲವು ಸಮಾಜ ಬಾಂಧವರು ಜಯಮಾಲಿನಿಯವರ ಅಕೌಂಟ್ ಗೆ ನೇರವಾಗಿ ಸಂದಾಯ ಮಾಡಿರುತ್ತಾರೆ. ಆ ಮೊತ್ತವು ರೂ 21000 ವಾಗಿದ್ದು, ಒಟ್ಟಾರೆ ಒಟ್ಟು ರೂ 1,07,000 ( ಒಂದು ಲಕ್ಷದ ಏಳು ಸಾವಿರ) ಬೆಂಗಳೂರು ಸಮಾಜ ಬಾಂಧವರಿಂದ ಸಂದಾಯವಾಗಿದೆ.
