ಮಂಗಳೂರು (ಕುಲಾಲ ವರ್ಲ್ಡ್ ಡಾಟ್ ಕಾಮ್): ಕಲಾ ಜಗತ್ತಿನಲ್ಲಿ ಬೆಳೆಯುತ್ತಿರುವ ಪ್ರತಿಭೆ ಸಮೃದ್ಧಿ ಎಂ ಕುಲಾಲ್ ಅವರು ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ ಕಾಸರಗೋಡು ಇವರ ವತಿಯಿಂದ ನೀಡಲಾಗುವ `ಕಲಾ ಚೈತನ್ಯ 2025′ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆದ ಸಂಸ್ಥೆಯ ಕಾರ್ಯಕ್ರಮದ ವೇದಿಕೆಯಲ್ಲಿ ಸಂಸ್ಥೆಯ ಪ್ರತಿಷ್ಠಿತ ಗೌರವ ಸನ್ಮಾನ ಪ್ರಶಸ್ತಿ ಕಲಾ ಚೈತನ್ಯ 2025 ಪುರಸ್ಕಾರವನ್ನು ಪಡೆದರು. ಇವರು ತೋಕೂರು ರಾಮಣ್ಣ ಶೆಟ್ಟಿ ಸಿ ಬಿ ಸ್ ಇ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಪಕ್ಷಿಕೆರೆಯ ಮನೋಜ್ ಕುಮಾರ್ ಮತ್ತು ಗೀತಾ ಮನೋಜ್ ದಂಪತಿಯ ಸುಪುತ್ರಿ.


